ಯಲಹಂಕ: ‘ಚಳಿ, ಮಳೆಯನ್ನು ಲೆಕ್ಕಿಸದೆ, ಎಂಥ ಸಂಕಷ್ಟ ಕಾಲದಲ್ಲಿಯೂ ದಿನಪತ್ರಿಕೆಗಳನ್ನು ಮನೆ ಮೆನೆಗೆ ತಲುಪಿಸುವ ಪತ್ರಿಕಾ ವಿತರಕರ ಸೇವೆಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಅವರ ಸೇವೆ ಶ್ಲಾಘನೀಯ’ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಪ್ರಶಂಸಿಸಿದರು.

ಯಲಹಂಕ ದಿನಪತ್ರಿಕೆ ವಿತರಕರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ‘ಪತ್ರಿಕಾ ವಿತರಕರ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.

‘ತಮಗೆಷ್ಟೇ ಕಷ್ಟಗಳಿದ್ದರೂ, ಸಮಯಕ್ಕೆ ಸರಿಯಾಗಿ ಓದುಗರಿಗೆ ಪತ್ರಿಕೆಗಳನ್ನು ತಲುಪಿಸುವ ಪತ್ರಿಕಾ ವಿತರಕರನ್ನು ನಾನು ಸಹೋದರರಂತೆ ಭಾವಿಸಿದ್ದೇನೆ’ ಎಂದರು.

‘ಈ ಭಾಗದ ಪತ್ರಿಕಾ ವಿತರಕರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಮುಂದೆಯೂ ಅವರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಪತ್ರಿಕಾ ವಿತರಕರಿಗೆ ಸೈಕಲ್, ಸಾಧ್ಯವಾದರೆ ದ್ವಿಚಕ್ರವಾಹನ ಹಾಗೂ ಪತ್ರಿಕಾ ವಿತರಕರ ಮಕ್ಕಳಿಗೆ ಶೈಕ್ಷಣಿಕ ನೆರವು ನೀಡುವಂತೆ ಸಂಘದ ಪದಾಧಿಕಾರಿಗಳು ಇದೇ ವೇಳೆ ಶಾಸಕರಿಗೆ ಮನವಿ ಮಾಡಿದರು.

ಅತ್ಯುತ್ತಮ ಕಾರ್ಯನಿಷ್ಠೆಗಾಗಿ ಹಿರಿಯ ಪತ್ರಿಕಾ ವಿತರಕರಾದ ರಮೇಶ್, ಪಿ.ಕೆ.ಎಸ್.ಶಂಕರ್, ಕುಮಾರ್, ರಾಜಶೇಖರ ರೆಡ್ಡಿ, ರವೀಂದ್ರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಎಸ್.ಎಸ್.ಎಲ್.ಸಿ ಮತ್ತು ಪದವಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಪತ್ರಿಕಾ ವಿತರಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಸನ್ಮಾನಿಸಲಾಯಿತು.

ಪತ್ರಿಕಾ ವಿತರಕರ ಸಂಘದ ರಾಜ್ಯಘಟಕದ ಅಧ್ಯಕ್ಷ ಶಂಭುಲಿಂಗ, ಯಲಹಂಕ ದಿನಪತ್ರಿಕೆ ವಿತರಕರ ಸಂಘದ ಅಧ್ಯಕ್ಷ ಎಂ.ಸತೀಶ್, ಪದಾಧಿಕಾರಿಗಳಾದ ವೈ.ಎಂ.ಮಂಜುನಾಥ್, ಪಿ.ಕೆ. ಎಸ್.ಶಂಕರ್, ಕೆ.ಎಸ್.ಸುರೇಶ್, ವೈ.ಸಿ.ವೀರಭದ್ರ, ಪ್ರಶಾಂತ್, ವೆಂಕಟೇಶಮೂರ್ತಿ, ಉಮೇಶ್, ವೀರೇಶ್, ಶಶಿ, ರವೀಂದ್ರಕುಮಾರ್, ಪ್ರದೀಪ್, ಮನು, ದೇವರಾಜ್, ನವೀನ್, ಮುನಿರಾಜು, ಚಂದ್ರು, ಮಧು, ಪವನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.