ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯದ ಪೈಪ್‌ನಲ್ಲಿ ಮೊಬೈಲ್ ಬಚ್ಚಿಟ್ಟಿದ್ದ ಕೈದಿ

Last Updated 8 ಜುಲೈ 2022, 19:54 IST
ಅಕ್ಷರ ಗಾತ್ರ

ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದ ಶೌಚಾಲಯದ ಪೈಪ್‌ನಲ್ಲಿ ಮೊಬೈಲ್ ಪತ್ತೆಯಾಗಿದ್ದು, ಅಕ್ರಮವಾಗಿ ಮೊಬೈಲ್ ಬಚ್ಚಿಟ್ಟುಕೊಂಡಿದ್ದ ಆರೋಪ ದಡಿ ವಿಚಾರಾಣಾಧೀನ ಕೈದಿ ಎನ್. ಮಧು ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘ಜೈಲಿನ ಟಾವರ್‌ 1ರ 6ನೇ ಬ್ಯಾರಕ್‌ನ 5ನೇ ಕೊಠಡಿಯ ಶೌಚಾ ಲಯದ ಪೈಪ್‌ನಲ್ಲಿ ಜಿಯೊ ಮೊಬೈಲ್ ಪತ್ತೆಯಾಗಿದೆ. ಇದನ್ನು ಜಪ್ತಿ ಮಾಡಿರುವ ಜೈಲಿನ ಸಿಬ್ಬಂದಿ ಠಾಣೆ ಸುಪರ್ದಿಗೆ ನೀಡಿ ದ್ದಾರೆ. ಜೊತೆಗೆ, ಸಿಬ್ಬಂದಿ ನೀಡಿರುವ ದೂರು ಆಧರಿಸಿ ಮಧು ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೈದಿ ಮಧು, ಜೈಲಿನಿಂದಲೇ ಯುವತಿಯೊಬ್ಬರಿಗೆ ಕರೆ ಮಾಡಿ ಬೆದರಿಸುತ್ತಿದ್ದ. ಈ ಬಗ್ಗೆ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ಗೊತ್ತಾಗುತ್ತಿದ್ದಂತೆ ಜೈಲಿನ ಸಿಬ್ಬಂದಿ, ಮಧು ಉಳಿದುಕೊಂಡಿದ್ದ 1ನೇ ಬ್ಯಾರಕ್‌ನ 2ನೇ ಕೊಠಡಿಯಲ್ಲಿ ತಪಾಸಣೆ ನಡಸಿ ದ್ದರು. ಆದರೆ, ಯಾವುದೇ ಮೊಬೈಲ್ ಸಿಕ್ಕಿರಲಿಲ್ಲ. ಮಧುನನ್ನು ವಿಚಾರಿಸಿದಾಗ, ಬೇರೊಬ್ಬನ ಬಳಿ ಮೊಬೈಲ್ ಪಡೆದು ಕರೆ ಮಾಡಿರುವು ದಾಗಿ ಹೇಳಿದ್ದ. ಅದೇ ಮಾಹಿತಿ ಆಧರಿಸಿ ಸಿಬ್ಬಂದಿ ಮೊಬೈಲ್ ಪತ್ತೆ ಮಾಡಿದ್ದಾರೆ’ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT