ಭಾನುವಾರ, ಏಪ್ರಿಲ್ 2, 2023
31 °C

ಪೆಟ್ರೋಲ್ ಬಂಕ್‌ ಸಿಬ್ಬಂದಿಗೆ ಮಚ್ಚು ತೋರಿಸಿ ದರೋಡೆ: ₹43 ಸಾವಿರ ಕಸಿದು ಪರಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೆಟ್ರೋಲ್‌ ಹಾಕಿಸಿಕೊಳ್ಳುವ ನೆಪದಲ್ಲಿ ಬೈಕ್‌ಗಳಲ್ಲಿ ಬಂದಿದ್ದ ದುಷ್ಕರ್ಮಿಗಳು, ಪೆಟ್ರೋಲ್ ಬಂಕ್‌ ಸಿಬ್ಬಂದಿಗೆ ಮಚ್ಚು ತೋರಿಸಿ, ಅವರ ಬಳಿಯಿದ್ದ ಹಣ ದೋಚಿ ಪರಾರಿಯಾಗಿರುವ ಘಟನೆ ಭಾರತಿನಗರ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

‘ವಿನೋದ್ ಆಟೊ ಸರ್ವೀಸ್ ಪೆಟ್ರೋಲ್ ಬಂಕ್‌ಗೆ ಶನಿವಾರ ಬೆಳಿಗ್ಗೆ ಮೂರು ಬೈಕ್‌ಗಳಲ್ಲಿ ಏಳು ಮಂದಿ ಬಂದಿದ್ದರು. ಏಕಾಏಕಿ ಮಚ್ಚು ತೋರಿಸಿ, ಅಲ್ಲಿದ್ದವರನ್ನು ಹೆದರಿಸಿದ ದುಷ್ಕರ್ಮಿಗಳು, ಬಿಲ್‌ ಕಲೆಕ್ಟರ್‌ ಬಳಿ ಇದ್ದ ₹43 ಸಾವಿರ ಕಸಿದು ಪರಾರಿಯಾಗಿದ್ದಾರೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಘಟನೆ ನಡೆದ ವೇಳೆ ಒಬ್ಬರೇ ಸಿಬ್ಬಂದಿ ಹೊರಗಿದ್ದರು. ಇಬ್ಬರು ಕಚೇರಿಯಲ್ಲಿದ್ದರು. ದುಷ್ಕರ್ಮಿಗಳು ಪರಾರಿಯಾಗುತ್ತಿದ್ದಾಗ ಸಿಬ್ಬಂದಿ ಕೂಗಿಕೊಂಡಿದ್ದಾರೆ. ಉಳಿದವರು ಸ್ತಳಕ್ಕೆ ಧಾವಿಸಿ ದುಷ್ಕರ್ಮಿಗಳನ್ನು ಹಿಡಿಯಲು ಯತ್ನಿಸಿದರೂ ಬೈಕ್‌ಗಳಲ್ಲಿ ತಪ್ಪಿಸಿಕೊಂಡಿದ್ದಾರೆ. ಬಂಕ್‌ನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಘಟನೆಯ ದೃಶ್ಯಾವಳಿಗಳನ್ನು ಭಾರತಿ ನಗರ ಪೊಲೀಸರಿಗೆ ನೀಡಲಾಗಿದೆ’ ಎಂದು ಪೆಟ್ರೋಲ್‌ ಬಂಕ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು