ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಪಿಎಚ್‌.ಡಿ. ವಿದ್ಯಾರ್ಥಿ ಅಸಹಜ ಸಾವು

Published 2 ಮೇ 2024, 19:19 IST
Last Updated 2 ಮೇ 2024, 19:19 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಪಿಎಚ್‌.ಡಿ. ವಿದ್ಯಾರ್ಥಿ ರಂಗನಾಥ್ ನಾಯಕ್ (27) ಅವರು ಬುಧವಾರ ಮೃತಪಟ್ಟಿದ್ದು, ಅವರ ಸಾವಿನ ಕುರಿತು ಅನುಮಾನ ವ್ಯಕ್ತವಾಗಿದೆ. ಸಾವಿನ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ ಯುಡಿಆರ್ (ಅಸಹಜ ಸಾವು) ದಾಖಲಾಗಿದೆ.

‘ಗೌರಿಬಿದನೂರಿನ ರಂಗನಾಥ್, ಭೂಗೋಳ ವಿಜ್ಞಾನ ವಿಷಯದ ಪಿಎಚ್‌.ಡಿ. ವಿದ್ಯಾರ್ಥಿ. ವಿಶ್ವವಿದ್ಯಾಲಯದ ವಸತಿನಿಲಯದ ಕೊಠಡಿಯಲ್ಲಿ ನೆಲೆಸಿದ್ದರು’ ಎಂದು ಪೊಲೀಸರು ಹೇಳಿದರು.

‘ಬುಧವಾರ ಬೆಳಿಗ್ಗೆ ಕ್ಯಾಂಟೀನ್‌ನಲ್ಲಿ ತಿಂಡಿ ತಿಂದಿದ್ದ ಅವರು, ಕೊಠಡಿಗೆ ವಾಪಸು ಹೋಗಿ ಮಲಗಿದ್ದರು. ಬಾಗಿಲು ಒಳಗಿನಿಂದ ಲಾಕ್‌ ಮಾಡಿಕೊಂಡಿದ್ದರು. ಸಹಪಾಠಿಗಳು ಕೊಠಡಿಗೆ ಬಂದಾಗ, ಬಾಗಿಲು ತೆರೆದಿರಲಿಲ್ಲ. ಅನುಮಾನಗೊಂಡ ಸಹಪಾಠಿಗಳು, ವಸತಿ ನಿಲಯದ ಸಿಬ್ಬಂದಿ ಮೂಲಕ ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ತಿಳಿಸಿದರು.

‘ಸಿಬ್ಬಂದಿ ವಸತಿನಿಲಯಕ್ಕೆ ಹೋಗಿ ಬಾಗಿಲು ತೆರೆದಿದ್ದರು. ಮಲಗಿದ್ದ ಸ್ಥಳದಲ್ಲಿಯೇ ರಂಗನಾಥ್ ಮೃತಪಟ್ಟಿದ್ದು ಗೊತ್ತಾಗಿತ್ತು.  ನಂತರ, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ಮಾಡಿಸಲಾಗಿದೆ. ವರದಿ ಬಂದ ಬಳಿಕವೇ ಸಾವಿನ ಬಗ್ಗೆ ನಿಖರ ಕಾರಣ ತಿಳಿಯಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT