ಬೆಂಗಳೂರು: ಅಂತರರಾಷ್ಟ್ರೀಯ ಛಾಯಾಚಿತ್ರ ಪ್ರದರ್ಶನ ಮೇಳ ‘ಫೋಟೊ ಟುಡೆ, ಸೈನ್ ಟುಡೆ–2022’ ಇದೇ 8 ಮತ್ತು 10ರಂದು ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ನಡೆಯಲಿದೆ.
ಫೋಟೊ ಹಾಗೂ ವಿಡಿಯೊಗ್ರಫಿಗೆ ಸಂಬಂಧಿಸಿದಂತೆ ವಿವಿಧ ಕ್ಯಾಮೆರಾ ತಯಾರಿಕಾ ಕಂಪನಿಗಳು ಹಾಗೂ ಫೋಟೊ ಲ್ಯಾಬ್‌ಗಳು ಸೇರಿದಂತೆ 150ಕ್ಕೂ ಹೆಚ್ಚು ಮಳಿಗೆಗಳು ಪಾಲ್ಗೊಳ್ಳಲಿವೆ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಬೆಂಜಮಿನ್ ಭಾಸ್ಕರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರದರ್ಶನ ಮೇಳವನ್ನು ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ಫೋಟೊ ಮತ್ತು ವಿಡಿಯೋಗ್ರಫಿಗೆ ಸಂಬಂಧಿಸಿದ 150ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. ಫೋಟೊ ಸ್ಟುಡಿಯೋಗೆ ಸಂಬಂಧಿಸಿದ ಉಪಕರಣಗಳು, ಫೋಟೊ ಮತ್ತು ವಿಡಿಯೊ ಕ್ಯಾಮೆರಾಗಳು, ಅಲ್ಬಂ ತಯಾರಿಸುವ, ವಿಡಿಯೊ ಎಡಿಟಿಂಗ್ ಮಾಡುವ, ಸ್ಟುಡಿಯೊ ಲೈಟಿಂಗ್‌ಗೆ ಪೂರಕವಾದ, ಫ್ರೇಮ್ ಸಿದ್ಧಪಡಿಸುವ ಉಪಕರಣಗಳು, ಐಡಿ ಕಾರ್ಡ್‌ಗಳ ಸಿದ್ಧಪಡಿಸುವಿಕೆ ಮಷಿನ್‌ಗಳ ಪ್ರದರ್ಶನ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.