ಯಲಹಂಕ: ಮಣಿಪಾಲ್ ಉನ್ನತ ಶಿಕ್ಷಣ ಅಕಾಡೆಮಿಯಲ್ಲಿ ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವ ಸಂಕಲ್ಪದೊಂದಿಗೆ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಇಂಡಿಯನ್ ಎಕನಾಮಿಕ್ ಟ್ರೇಡ್ ಆರ್ಗನೈಸೇಶನ್(ಐಇಟಿಒ) ಮತ್ತು ಮಣಿಪಾಲ್ ಸೆಂಟರ್ ಫಾರ್ ದ್ವೀಪ ಸಂಸ್ಥೆಯ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗಿಡನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಣಿಪಾಲ್ ಉನ್ನತ ಶಿಕ್ಷಣ ಅಕಾಡೆಮಿಯ ಕುಲಪತಿ ಪ್ರೊ.ಮಧು ವೀರರಾಘವನ್, ‘ಪ್ರತಿ ವರ್ಷ ವಿಶ್ವದಾದ್ಯಂತ 40 ಕೋಟಿ ಟನ್ನಷ್ಟು ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ನಿಯಂತ್ರಣಕ್ಕಾಗಿ ತಕ್ಷಣದ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ’ ಎಂದರು.

‘ಜವಾಬ್ದಾರಿಯುತ ವಿಶ್ವವಿದ್ಯಾಲಯವಾಗಿ ನಾವು ಶೂನ್ಯ-ತ್ಯಾಜ್ಯ ಪರಿಸರ ರೂಪಿಸುವುದಕ್ಕೆ ಬದ್ಧರಾಗಿದ್ದೇವೆ. ಕ್ಯಾಂಪಸ್ನಲ್ಲಿ ಪ್ಲಾಸ್ಟಿಕ್ ಬಾಟಲಿಗಳ ಬಳಕೆ ನಿಷೇಧಿಸಿದ್ದು, ಸುಸ್ಥಿರ ಪರ್ಯಾಯವಾಗಿ ಗಾಜಿನ ಬಾಟಲಿಗಳನ್ನು ಬಳಸಲು ಪ್ರಾರಂಭಿಸಿದ್ದೇವೆ. ವೇದಾಂತ ಸಂಸ್ಥೆಯ ಪಾಲುದಾರಿಕೆಯೊಂದಿಗೆ ಸಮಗ್ರ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ರೂಪಿಸಿದ್ದೇವೆ ಎಂದು ತಿಳಿಸಿದರು.

ಭಾರತದಲ್ಲಿರುವ ಈಕ್ವೆಡಾರ್ನ ರಾಯಭಾರಿ ಫರ್ನಾಂಡೋ ಬುಚೆಲಿ ಮಾತನಾಡಿದರು. ಮಣಿಪಾಲ್ ಸೆಂಟರ್ ಫಾರ್ ದ್ವೀಪ ಸಂಸ್ಥೆಯ ಪ್ರೊ.ದೀಪ್ತಾ ಸತೀಶ್, ಐಐಎಂನ ಸೆಂಟರ್ ಫಾರ್ ಪಬ್ಲಿಕ್ ಪಾಲಿಸಿ ಕೇಂದ್ರದ ಅಧ್ಯಕ್ಷ ಪ್ರೊ.ಎಂ.ವಿ.ರಾಜೀವ್ಗೌಡ, ಐಐಟಿಒ ಅಧ್ಯಕ್ಷ ಡಾ.ಆಸಿಪ್ ಇಕ್ಬಾಲ್ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನಡೆದ ಸಂವಾದದಲ್ಲಿ ಯೂನಿಫೈಡ್ ಇಂಟೆಲಿಜೆನ್ಸ್ ಪ್ರೈ. ಲಿಮಿಟೆಡ್ನ ಸಹ-ಸಂಸ್ಥಾಪಕ ಟಿ.ಪಾಲ್ ಕೋಶಿ, ಸಮುದ್ರ ಆಹಾರ ಉದ್ಯಮ ತಜ್ಞ ದಾವೂದ್ ಸೇಟ್, ಶಿಕ್ಷಣ ತಜ್ಞೆ ಮೀರಾ ಬೈಂದೂರ್ ಹಾಗೂ ಪ್ರೊ.ಎಂ.ವಿ.ರಾಜೀವ್ಗೌಡ ಪ್ಲಾಸ್ಟಿಕ್ ನಿರ್ಮೂಲನೆಯ ವಿವಿಧ ವಿಚಾರಗಳನ್ನು ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.