ಬೆಂಗಳೂರು: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ನ ‘ಭೂಮಿಕಾ ಕ್ಲಬ್’ ವೇದಿಕೆಯು ಆ. 27ರಂದು 8ನೇ ಆವೃತ್ತಿಯ ಕಾರ್ಯಕ್ರಮ ಹಮ್ಮಿಕೊಂಡಿದೆ.
‘ಫ್ರೀಡಂ ಆಯಿಲ್’ ಸಹಯೋಗದಲ್ಲಿ ಬಸವೇಶ್ವರನಗರ 2ನೇ ಅಡ್ಡರಸ್ತೆಯ ಕಮಲಾನಗರದ 8ನೇ ಮುಖ್ಯರಸ್ತೆ, 1ನೇ ಸಿ.ಎ. ಸೈಟ್‌ನಲ್ಲಿರುವ ಕೆಇಎ ಪ್ರಭಾತ್ ರಂಗಮಂದಿರದಲ್ಲಿ ಮಧ್ಯಾಹ್ನ 2.30ಕ್ಕೆ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮವನ್ನು ಅರ್ಚನಾ ಜೋಯಿಸ್ ಉದ್ಘಾಟಿಸಲಿದ್ದಾರೆ. ಡಯಟ್ ಮತ್ತು ನ್ಯೂಟ್ರಿಷನ್ ಗೋಷ್ಠಿಯನ್ನು ಐಎಸ್‌ಪಿಎಎನ್ ಎಸ್‌ಆರ್ ಮಾರ್ಗದರ್ಶಕರಾದ ಅಪರ್ಣಾ ನಾಗೇಂದ್ರ ನಡೆಸಿಕೊಡಲಿದ್ದಾರೆ. ಅಕ್ಷತಾ ಪಾಂಡವಪುರ ಅವರಿಂದ ಏಕಾಂಕ ನಾಟಕ, ಭಾಗ್ಯಶ್ರೀ ಗೌಡ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿವೆ.
ಸ್ವಾತಂತ್ರ್ಯದ ಸ್ಫೂರ್ತಿಯನ್ನು ಆಚರಿಸಲು, ಭಾರತೀಯರೆಂಬ ಹೆಮ್ಮೆಯನ್ನು ಬೆಳಗಿಸಲು, ಹೊಸ ವಿಷಯ ತಿಳಿದುಕೊಳ್ಳಲು, ನಟನೆ, ಸಂಗೀತದ ಈ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಕಾರ್ಯಕ್ರಮದಲ್ಲಿ ಅಚ್ಚರಿ ಉಡುಗೊರೆ ಗೆಲ್ಲುವ ಅವಕಾಶವೂ ಇರಲಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಥವಾ bit.ly/bhumikaclubaugust ಹೆಸರು ನೋಂದಣಿ ಮಾಡಿಕೊಳ್ಳಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.