ವಿಭಾಗ ಮಟ್ಟಕ್ಕಿಂತ ರಾಜ್ಯಮಟ್ಟದಲ್ಲಿ ‘ಪ್ರಜಾವಾಣಿ’ ರಸಪ್ರಶ್ನೆ ಕಠಿಣ ಎನ್ನಿಸಿತು. ಟ್ವಿಸ್ಟ್ ಎನ್ನಿಸುವ ಪ್ರಶ್ನೆಗಳು ನಮ್ಮನ್ನು ಯೋಚಿಸುವಂತೆ ಮಾಡಿದವು. ರಸಪ್ರಶ್ನೆ ಹೇಗೆ ಎದುರಿಸಬೇಕು ಎನ್ನುವ ಅಂಶ ತಿಳಿದುಕೊಂಡೆವು. ಮೊದಲನೇ ಸ್ಥಾನ ಪಡೆದಿದ್ದಕ್ಕೆ ಖುಷಿಯಾಗಿದೆ
– ತ್ರಿವಿಕ್ರಮ ಕೇಶವನ್ ವಿಷ್ಣು ಎಸ್.ಗಣೇಶ್ ಶಿಶುಗೃಹ ಸೀನಿಯರ್ ಸ್ಕೂಲ್ ಬೆಂಗಳೂರು
ಮೇಘವಿ ಮಂಜುನಾಥ್ ಅವರು ನಡೆಸಿಕೊಟ್ಟ ರಸಪ್ರಶ್ನೆ ಶೈಲಿ ನೀಡುತ್ತಿದ್ದ ವಿವರಣೆ ಉತ್ಸಾಹ ತುಂಬುತ್ತಿದ್ದ ಪರಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯ ಮಾಹಿತಿ ಒತ್ತಡ ಎನ್ನಿಸಲಿಲ್ಲ. ಜ್ಞಾನದ ಹರಿವು ವಿಸ್ತರಿಸಿಕೊಳ್ಳುವ ಅವಕಾಶವನ್ನು ‘ಪ್ರಜಾವಾಣಿ’ ಕಲ್ಪಿಸಿತು
– ತಕ್ಷಕ್ ಶೆಟ್ಟಿ ಸೃಜನ್ ಎನ್.ವೈ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ ಉಡುಪಿ ಜಿಲ್ಲೆ
ಹಿಂದೆ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರೂ ರಾಜ್ಯ ಮಟ್ಟದ ಹಂತದವರೆಗೂ ಹೋಗಿರಲಿಲ್ಲ. ಇದು ‘ಪ್ರಜಾವಾಣಿ’ ರಸಪ್ರಶ್ನೆ ನಡೆಸಿದ ರೀತಿ ಚಿಂತನೆಯ ಕ್ರಮವನ್ನು ಬದಲಿಸಿದೆ. ನಮ್ಮ ಪ್ರಯತ್ನಕ್ಕೆ ಮೂರನೇ ಬಹುಮಾನ ಲಭಿಸಿದ್ದು ಖುಷಿ ತಂದಿದೆ
–ತೇಜಲ್ ಅಮಾರಿ ಸ್ತುತಿ ರಾಠಿ ಬಸವೇಶ್ವರ ಅಂತರರಾಷ್ಟ್ರೀಯ ಪಬ್ಲಿಕ್ ಶಾಲೆ ಬಾಗಲಕೋಟೆ