ಬೆಂಗಳೂರು: ‘ಪ್ರಜಾವಾಣಿ– ರಸಪ್ರಶ್ನೆ ಚಾಂಪಿಯನ್ಶಿಪ್’ನ್ ಫೈನಲ್ಗೆ ಆಯ್ಕೆಯಾಗಿದ್ದ ಅಭ್ಯರ್ಥಿಗಳಿಗೆ ಈ ಕ್ವಿಜ್ನ ಭಾಗವಾಗಿ ಕಲಿಕಾ ಕಾರ್ಯಾಗಾರ ನಡೆಸಲಾಯಿತು.

ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ, ಮೈಸೂರು, ಬೀದರ್, ಬಾಗಲಕೋಟೆ ವಲಯಗಳಲ್ಲಿ ಗೆಲುವು ಸಾಧಿಸಿ, ಫೈನಲ್ಗೆ ಆಯ್ಕೆಯಾಗಿದ್ದ ಆರು ತಂಡಗಳ ಅಭ್ಯರ್ಥಿಗಳು ಈ ಕಾರ್ಯಾಗಾರದ ಭಾಗವಾಗಿದ್ದರು. ಕುಂಬಳಗೋಡಿನಲ್ಲಿರುವ ದಿ ಪ್ರಿಂಟರ್ಸ್ ಮೈಸೂರು ಪ್ರೈವೆಟ್ ಲಿಮಿಟೆಡ್ನ (‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’) ಮುದ್ರಣಾಲಯಕ್ಕೆ ಸೋಮವಾರ ಸಂಜೆ ಭೇಟಿ ನೀಡಿ, ಮುದ್ರಣ ಪ್ರಕ್ರಿಯೆ ಬಗ್ಗೆ ತಿಳಿದುಕೊಂಡರು.

ಎಂ.ಎಚ್. ಮರಿಗೌಡ ರಸ್ತೆಯಲ್ಲಿರುವ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿಯು (ಕೆಎಂಎಫ್) ಪ್ರಧಾನ ಕಚೇರಿಗೆ ಮಂಗಳವಾರ ಭೇಟಿ ನೀಡಿದರು. ಅಲ್ಲಿ ಹಾಲು ಸಂಸ್ಕರಿಸುವ ವಿಧಾನ, ಹಾಲಿನ ಉತ್ಪನ್ನಗಳ ತಯಾರಿಕೆ, ನಂದಿನಿ ಬ್ರ್ಯಾಂಡ್ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಂಡರು.

ಬೈಯಪ್ಪನಹಳ್ಳಿಯಲ್ಲಿ ಇರುವ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿ.ಎ೦.ಆರ್.ಸಿ.ಎಲ್) ಕಾರ್ಯಾಚರಣೆ ನಿಯಂತ್ರಣ ಕೇಂದ್ರಕ್ಕೂ ಮಕ್ಕಳು ಭೇಟಿ ನೀಡಿದರು. ನಮ್ಮ ಮೆಟ್ರೊದ ನೇರಳೆ ಮಾರ್ಗ ಹಾಗೂ ಹಸಿರು ಮಾರ್ಗ ಹೇಗೆ ಕಾರ್ಯಾಚರಣೆ ಮಾಡುತ್ತದೆ? ನಿಯಂತ್ರಣ ಹೇಗೆ ಸೇರಿ ವಿವಿಧ ಸಂಗತಿಗಳ ಬಗ್ಗೆ ಮಾಹಿತಿ ಒದಗಿಸಲಾಯಿತು. ನಿಂತಿದ್ದ ಮೆಟ್ರೊ ರೈಲು ಒಂದರಲ್ಲಿ ಚಾಲಕರ ಆಸನದಲ್ಲಿ ಕುಳಿತು, ರೈಲು ನಿರ್ವಹಣೆ ಬಗ್ಗೆ ಅನುಭವ ಪಡೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.