'ಹಿಂದೂ ರಾಷ್ಟ್ರ ನಿರ್ಮಾಣ ಅಸಾಧ್ಯ': ಪ್ರಸನ್ನ

7

'ಹಿಂದೂ ರಾಷ್ಟ್ರ ನಿರ್ಮಾಣ ಅಸಾಧ್ಯ': ಪ್ರಸನ್ನ

Published:
Updated:

ಬೆಂಗಳೂರು: 'ಬಿಜೆಪಿ ಪಕ್ಷ ಬಹು ಸಂಖ್ಯಾತರನ್ನು ಒಗ್ಗೂಡಿಸಿ, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ನಿರ್ಮಿಸಲು ಹೊರಟಿದೆ. ಈ ಕುರಿತು ಚಿಂತಿಸುವ ತುರ್ತು ಇದೆ' ಎಂದು ಚಿಂತಕ ಪ್ರಸನ್ನ ಹೇಳಿದರು.

ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿದಲ್ಲಿ ಸೋಮವಾರ ಆಯೋಜಿಸಿದ್ದ 'ಭಾರತದ ಮಾಜಿ ಪ್ರಧಾನಿ ಚಂದ್ರಶೇಖರ್ ಪಾದಯಾತ್ರೆ-35 ಹಾಗೂ ತುರ್ತು ಪರಿಸ್ಥಿತಿ ಕರಾಳ ನೆನಪು ಪ್ರಸ್ತುತ ರೂಪಾಂತರಗಳು' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಘಟನೆ ತಕ್ಷಣದ ರಾಜಕೀಯ ಉದ್ದೇಶಕ್ಕೆ ಹಿಂದುತ್ವದ ಬೆನ್ಹತ್ತಿದೆ. ಇಂತಹ ಪ್ರಮಾದ ಸಲ್ಲದು. ಹಿಂದೂ ರಾಷ್ಟ್ರ ನಿರ್ಮಾಣ ಅಸಾಧ್ಯ'  ಎಂದರು.

'ಇಂತಹ  ಹರಸಾಹಸಗಳಿಂದ ಶೇ.14 ರಷ್ಟಿರುವ ಮುಸ್ಲಿಂ, ದಲಿತ, ಇತರ ಜನಾಂಗಗಳನ್ನು ಅಟೊಂಬಾಂಬ್‌ಗಳಾಗಿ ಪರಿವರ್ತಿಸಿ, ಅವರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ' ಎಂದರು. 

ಕರಾಳ ದಿನಗಳ ನೆನೆದು ಹತಾಷರಾಗದಿರಿ, ಜಾಗೃತರಾಗಿ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !