ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯೋತ್ಸವ: 20 ಮಂದಿಗೆ ರಾಷ್ಟ್ರಪತಿ ಪದಕ

Published 25 ಜನವರಿ 2024, 15:55 IST
Last Updated 25 ಜನವರಿ 2024, 15:55 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ರಾಜ್ಯದ ಎಡಿಜಿಪಿ ಸೌಮೇಂದು ಮುಖರ್ಜಿ ಸೇರಿದಂತೆ 20 ಅಧಿಕಾರಿಗಳು ಹಾಗೂ ಪೊಲೀಸರಿಗೆ 2024ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ.

ಕರ್ನಾಟಕ ವೃಂದದ ಐಪಿಎಸ್‌ ಅಧಿಕಾರಿಗಳಾದ ಕೇಂದ್ರ ಗೃಹ ಇಲಾಖೆಯ ಜಂಟಿ ನಿರ್ದೇಶಕ ಪಂಕಜ್‌ಕುಮಾರ್ ಠಾಕೂರ್ ಅವರಿಗೆ ರಾಷ್ಟ್ರಪತಿ ವಿಶಿಷ್ಠ ಸೇವಾ ಪದಕ, ಸಿಬಿಐ ಜಂಟಿ ನಿರ್ದೇಶಕ ಪ್ರವೀಣ್‌ ಮಧುಕರ್ ಪವಾರ್‌ ಹಾಗೂ ಕೇಂದ್ರ ಗೃಹ ಇಲಾಖೆಯ ಉಪನಿರ್ದೇಶಕ ಕೌಶಲೇಂದ್ರ ಕುಮಾರ್ ಅವರಿಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ಲಭಿಸಿದೆ.

ಗಣರಾಜ್ಯೋತ್ಸವ ದಿನದಂದು ಪದಕ ಪ್ರದಾನ ಕಾರ್ಯಕ್ರಮ ಜರುಗಲಿದೆ. ಪದಕ ಪಡೆದವರ ವಿವರ ಇಲ್ಲಿದೆ.

2024ನೇ ಸಾಲಿನ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ

1) ಸೌಮೇಂದು ಮುಖರ್ಜಿ, ಎಡಿಜಿಪಿ (ಆಡಳಿತ)

2) ಸುಧೀರ್ ಎಂ. ಹೆಗ್ಡೆ, ಡಿವೈಎಸ್‌ಪಿ (ಕೆಎಸ್‌ಎಚ್‌ಆರ್‌ಸಿ)

2024ನೇ ಸಾಲಿನ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ

1) ರಮಣ್ ಗುಪ್ತ, ಹೆಚ್ಚುವರಿ ಪೊಲೀಸ್‌ ಕಮಿಶನರ್‌, ಬೆಂಗಳೂರು ನಗರ

2) ಅನಿಲ್‌ ಕುಮಾರ್ ಎಸ್. ಭೂಮರಡ್ಡಿ, ಹೆಚ್ಚುವರಿ ಎಸ್‌ಪಿ, ಶಿವಮೊಗ್ಗ

3) ನಾಗರಾಜ ಎ., ಕಮಾಂಡೆಂಟ್‌, 1ನೇ ಪಡೆ, ಕೆಎಸ್‌ಐಎಸ್‌ಎಫ್‌ ಬೆಂಗಳೂರು

4) ಎಸ್.ಪಿ. ಧರಣೀಶ, ಹೆಚ್ಚುವರಿ ಎಸ್‌ಪಿ, ಯಾದಗಿರಿ

5) ನಾರಾಯಣಸ್ವಾಮಿ ವಿ., ಸಹಾಯಕ ಪೊಲೀಸ್‌ ಕಮಿಷನರ್‌, ಜಯನಗರ ಉಪವಿಭಾಗ, ದಕ್ಷಿಣ ವಿಭಾಗ ಬೆಂಗಳೂರು ನಗರ

6) ವಿ. ರಘುಕುಮಾರ್, ಸಹಾಯಕ ನಿರ್ದೇಶಕ, ರಾಜ್ಯ ಗುಪ್ತವಾರ್ತೆ, ಬೆಂಗಳೂರು

7) ಬಿ.ಎಸ್. ಶ್ರೀನಿವಾಸ ರಾಜ್, ಡಿವೈಎಸ್‌ಪಿ, ಸಿಐಡಿ, ಬೆಂಗಳೂರು

8) ಎಸ್.ಆರ್. ವೀರೇಂದ್ರ ಪ್ರಸಾದ್, ಪೊಲೀಸ್‌ ಇನ್‌ಸ್ಪೆಕ್ಟರ್, ಚನ್ನರಾಯನಪಟ್ಟಣ ಪೊಲೀಸ್‌ ಠಾಣೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ

9) ಎಂ.ಆರ್. ಹರೀಶ್, ಪೊಲೀಸ್ ಇನ್‌ಸ್ಪೆಕ್ಟರ್, ದೊಡ್ಡಬೆಳವಂಗಲ ಪೊಲೀಸ್ ಠಾಣೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ

10) ಆರ್. ಪುಂಡಲೀಕ, ವಿಶೇಷ ಆರ್‌ಎಸ್‌ಐ 6ನೇ ಪಡೆ, ಕೆಎಸ್‌ಆರ್‌ಪಿ ಕಲಬುರಗಿ

11) ರಾಮ, ಎಎಸ್‌ಐ, ಬಜ್ಪೆ ಪೊಲೀಸ್ ಠಾಣೆ, ಮಂಗಳೂರು ನಗರ

12) ಸುರೇಶ್ ಆರ್. ಪುಡಕಲಕಟ್ಟಿ, ಎಎಸ್‌ಐ (ವೈರ್‌ಲೆಸ್‌) ಕೇಂದ್ರ ಕಚೇರಿ ಬೆಂಗಳೂರು

13) ದಾದಾಪೀರ್ ಎಚ್., ಎಆರ್‌ಎಸ್‌ಐ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ದಾವಣಗೆರೆ

14) ವೆಂಕಟೇಶ ಸಿ., ಸಹಾಯಕ ಗುಪ್ತದಳ ಅಧಿಕಾರಿ, ರಾಜ್ಯ ಗುಪ್ತವಾರ್ತೆ, ಬೆಂಗಳೂರು

15) ಶಮಂತ್ ಯಶ್ ಜಿ., ಎಎಸ್ಐ, ಸಿಐಡಿ ಬೆಂಗಳೂರು

16) ಸಿ.ವಿ. ಗೋವಿಂದ ರಾಜು, ಎಚ್‌ಸಿ 4ನೇ ಪಡೆ, ಕೆಎಸ್‌ಆರ್‌ಪಿ ಬೆಂಗಳೂರು

17) ಮಣಿಕಂಠ ಎಂ., ಸಿಎಚ್‌ಸಿ, ಸಹಾಯಕ ಪೊಲೀಸ್ ಕಮಿಶನರ್ ಕಚೇರಿ, ಸಂಚಾರ ಉಪವಿಭಾಗ, ಮಂಗಳೂರು ನಗರ

18) ಎಸ್.ಎನ್. ನರಸಿಂಹರಾಜು, ಸಿಎಚ್‌ಸಿ, ಜಿಲ್ಲಾ ಪೊಲೀಸ್ ಕಚೇರಿ ತಾಂತ್ರಿಕ ವಿಭಾಗ, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT