ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ–ಟೀ, ತಿನಿಸು ದರ ಏರಿಕೆ

Last Updated 6 ಫೆಬ್ರುವರಿ 2020, 19:59 IST
ಅಕ್ಷರ ಗಾತ್ರ

ಬೆಂಗಳೂರು: ಹಾಲು ಮತ್ತು ಮೊಸರಿನ ದರ ₹2 ಹೆಚ್ಚಳವಾದ ಬೆನ್ನಲ್ಲೇ ಕಾಫಿ, ಟೀ ಮತ್ತು ಊಟ, ಉಪಾಹಾರದ ದರ ಹೆಚ್ಚಳಕ್ಕೆ ಹೋಟೆಲ್ ಮತ್ತು ಉಪಾಹಾರ ಮಂದಿರಗಳ ಮಾಲೀಕರು ನಿರ್ಧರಿಸಿದ್ದಾರೆ.

ಹಾಲಿನ ಎಲ್ಲಾ ಉತ್ಪನ್ನಗಳ ದರಹೆಚ್ಚಳವಾಗಿದೆ. ಹೀಗಾಗಿ, ದರ ಹೆಚ್ಚಳಮಾಡುವುದು ಅನಿವಾರ್ಯ ಎನ್ನುವುದು ಹೋಟೆಲ್ ಮಾಲೀಕರ ಅಭಿಪ್ರಾಯ.

ಈ ಸಂಬಂಧ ಹೋಟೆಲ್ ಮಾಲೀಕರ ಸಭೆ ನಗರದಲ್ಲಿ ನಡೆದಿದ್ದು, ದರ ಏರಿಕೆ ಸಂಬಂಧ ಚರ್ಚೆ ನಡೆದಿದೆ. ಇದಕ್ಕೆ ಸಂಘ ಸಮ್ಮತಿಸಿದ್ದು, ಶೀಘ್ರವೇ ದರ ಹೆಚ್ಚಳವಾಗಲಿದೆ.

‘10 ವರ್ಷದಿಂದ ದರ ಏರಿಕೆ ಮಾಡಿರಲಿಲ್ಲ. ಇಂತಿಷ್ಟೇ ಏರಿಕೆ ಮಾಡಬೇಕು ಅಥವಾ ಮಾಡಬಾರದು ಎಂದು
ಸಂಘ ಯಾರಿಗೂ ನಿರ್ದೇಶನ ನೀಡುವುದಿಲ್ಲ. ಆದರೆ, ಹೆಚ್ಚಳ ಮಾಡಬೇಕು ಎಂಬ ಅಭಿಪ್ರಾಯ ಎಲ್ಲಾ ಮಾಲೀಕರಿಂದ ಬಂದಿದೆ. ಸಾರ್ವಜನಿಕರಿಗೆ ಹೊರೆ ಆಗದಂತೆ ನೋಡಿಕೊಳ್ಳಲು ಸಲಹೆ ನೀಡಲಾಗಿದೆ’ ಎಂದು ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ಉಪಾಹಾರ ಮಂದಿರಗಳ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲ್ಲೆಡೆ ಕಾಫಿ–ಟೀ ದರ ₹2 ಹೆಚ್ಚಳವಾಗಲಿದೆ. ಉಪಾಹಾರದ ದರ ₹10 ಇದ್ದದ್ದು ₹12 ಆಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT