ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದ್ಮಶ್ರೀ ವಿದ್ಯಾಲಯದಲ್ಲಿ ಆಧುನಿಕ ಕೌಶಲಕ್ಕೆ ಆದ್ಯತೆ: ಕುಲಪತಿ ಎಸ್‌.ಎಂ.ಜಯಕರ

Published 16 ಮಾರ್ಚ್ 2024, 16:17 IST
Last Updated 16 ಮಾರ್ಚ್ 2024, 16:17 IST
ಅಕ್ಷರ ಗಾತ್ರ

ಬೆಂಗಳೂರು: ಪದ್ಮಶ್ರೀ ವಿದ್ಯಾಲಯವು  ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ 21ನೇ ಶತಮಾನಕ್ಕೆ ಅಗತ್ಯವಿರುವ ಕೌಶಲಗಳನ್ನು ಮೈಗೂಡಿಸಲು ಆದ್ಯತೆ ನೀಡುತ್ತಿರುವುದು ಅನುಕರಣೀಯ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ  ಎಸ್‌.ಎಂ.ಜಯಕರ ಶ್ಲಾಘಿಸಿದರು.

 ‘ಪದ್ಮಶ್ರೀ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ ಆ್ಯಂಡ್‌ ಸೈನ್ಸಸ್’ ನ್ಯಾಕ್ ಎ++ ಮಾನ್ಯತೆ ಪಡೆದು ಸ್ವಾಯತ್ತ ಶಿಕ್ಷಣ ಸಂಸ್ಥೆ ಸ್ಥಾನಮಾನಕ್ಕೆ ಪದಾರ್ಪಣೆ ಮಾಡಿದ ಪ್ರಯುಕ್ತ ಕೊಮ್ಮಘಟ್ಟದಲ್ಲಿರುವ ಕ್ಯಾಂಪಸ್‌ನಲ್ಲಿ ಶನಿವಾರ ಏರ್ಪಡಿಸಲಾಗಿದ್ದ ‘ನವೋತ್ಥಾನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕ ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ‘ಸಂಸ್ಥೆಯ ಬೋಧಕ ಸಿಬ್ಬಂದಿಯ ಪರಿಶ್ರಮ ಹಾಗೂ ಕಾಳಜಿಯಿಂದಾಗಿ ಈ ಸ್ಥಾನಮಾನ ಸಿಕ್ಕಿದೆ’ ಎಂದು ತಿಳಿಸಿದರು.

ಸಂಸ್ಥೆಯ ಪ್ರಾಂಶುಪಾಲರಾದ ಅನುರಾಧಾ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಟಿ.ಕೆ. ನಾರಾಯಣಪ್ಪ, ಅಧ್ಯಕ್ಷ ಸತೀಶ್, ನಿರ್ದೇಶಕರಾದ ರಾಜೇಶ್ ಶೆಣೈ, ಶಿವಪ್ರಸಾದ್, ಶ್ಯಾಮ್, ರಾಜಣ್ಣ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT