ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯು ‘ನಂದಿನಿ’ ಬ್ರ್ಯಾಂಡ್ ಅನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸುತ್ತಿದ್ದು, ಆಗಸ್ಟ್ನಲ್ಲಿ ದುಬೈಯಲ್ಲಿ ‘ನಂದಿನಿ ಕೆಫೆ ಮೂ’ ಆರಂಭಿಸಲಿದೆ. ಇದಕ್ಕೆ ನಂದಿನಿ ಉತ್ಪನ್ನಗಳನ್ನು ರಫ್ತು ಮಾಡುವ ವಾಹನಗಳಿಗೆ ಗುರುವಾರ ಚಾಲನೆ ನೀಡಲಾಯಿತು.

ಮಹಾಮಂಡಳಿ ಅಧ್ಯಕ್ಷ ಭೀಮಾ ನಾಯಕ್, ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಎಂ.ಕೆ. ಈ ವಾಹನಗಳಿಗೆ ಹಸಿರು ನಿಶಾನೆ ತೋರಿಸಿದರು.

ನಂದಿನಿ ಕೆಫೆ ಮೂ: ನಂದಿನಿ ಪಿಜ್ಜಾ ಬರ್ಗರ್, ಸ್ಯಾಂಡ್ವಿಚ್, ಮಿಲ್ಕ್ ಶೇಕ್ ಸಹಿತ ವಿವಿಧ ಬಗೆಯ ಖಾದ್ಯಗಳು, ನಂದಿನಿಯ ಎಲ್ಲ ಉತ್ಪನ್ನಗಳನ್ನು ಕುಳಿತು ಸವಿಯಲು ಅವಕಾಶ ಮತ್ತು ವಾತಾವರಣ ಕಲ್ಪಿಸುವ ಯೋಜನೆಯೇ ‘ನಂದಿನಿ ಕೆಫೆ ಮೂ’. ರಾಜ್ಯದ 13 ಹಾಗೂ ಹೊರರಾಜ್ಯಗಳ 8 ಸ್ಥಳಗಳಲ್ಲಿ ನಂದಿನಿ ಕೆಫೆ ಮೂ ಆರಂಭಿಸಲಾಗಿದೆ. ಈ ಕೆಫೆಗಳು ತಿಂಗಳಿಗೆ ₹ 1.5 ಕೋಟಿ ವ್ಯವಹಾರ ಮಾಡುತ್ತಿವೆ. ಇದೇ ಪ್ರಥಮ ಬಾರಿಗೆ ಹೊರದೇಶದಲ್ಲಿ ನಂದಿನಿ ಕೆಫೆ ಮೂ ಆರಂಭಗೊಳ್ಳುತ್ತಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.