ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದ ಮೊದಲ ಎರಡು ತಿಂಗಳಲ್ಲಿ ಬಿಬಿಎಂಪಿ ₹2,424.93 ಕೋಟಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಿದೆ.

ಶೇಕಡ 5ರಷ್ಟು ರಿಯಾಯಿತಿ ಮೇ 31ರಂದು ಅಂತ್ಯಗೊಳ್ಳಲಿದ್ದು, ಆಸ್ತಿ ಮಾಲೀಕರು ಈ ಕೊಡುಗೆಯನ್ನು ಉಪಯೋಗಿಸಿಕೊಂಡಿದ್ದಾರೆ.

ಈ ವರ್ಷ ಆಸ್ತಿ ತೆರಿಗೆ ಜೊತೆಗೆ ತ್ಯಾಜ್ಯ ನಿರ್ವಹಣಾ ಬಳಕೆದಾರರ ಶುಲ್ಕ ಜಾರಿ ಮಾಡಲಾಗಿದ್ದು, ಅದರಿಂದ ತೆರಿಗೆ ಸಂಗ್ರಹದ ಪ್ರಮಾಣ ಹೆಚ್ಚಾಗಿದೆ. ಬಳಕೆದಾರರ ಶುಲ್ಕವಾಗಿ ಸುಮಾರು ₹700 ಕೋಟಿಯನ್ನು ಸಂಗ್ರಹಿಸುವ ಗುರಿಯನ್ನು ಬಿಬಿಎಂಪಿ ಹೊಂದಿದೆ.

2025ರ ಏಪ್ರಿಲ್ ಅಂತ್ಯಕ್ಕೆ ₹1,200 ಕೋಟಿಯಷ್ಟು ಆಸ್ತಿ ತೆರಿಗೆ ಸಂಗ್ರಹವಾಗಿತ್ತು. ಅದೇ ಪ್ರಮಾಣ ಮೇ ತಿಂಗಳಲ್ಲೂ ಮುಂದುವರಿದಿದ್ದು, ಅದಕ್ಕಿಂತ ಕೊಂಚ ಹೆಚ್ಚು ಸಂಗ್ರಹವಾಗಿದೆ. ಮೇ 31ರಂದು ಇನ್ನಷ್ಟು ಕೋಟಿ ಸಂಗ್ರಹವಾಗುವ ನಿರೀಕ್ಷೆಯನ್ನು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಹೊಂದಿದ್ದಾರೆ.

21.73 ಲಕ್ಷ ಆಸ್ತಿಗಳಿಂದ ₹4,094.82 ಕೋಟಿ ತೆರಿಗೆ, 3.75 ಲಕ್ಷ ಸುಸ್ತಿದಾರರಿಂದ ₹836.34 ಕೋಟಿ ಬಾಕಿ ಹಾಗೂ 9,904 ಆಸ್ತಿಗಳಿಂದ ಪರಿಷ್ಕೃತ ತೆರಿಗೆ ₹152.80 ಕೋಟಿ ಸೇರಿದಂತೆ ಸುಮಾರು ₹5,100 ಕೋಟಿ ಸಂಗ್ರಹಿಸುವ ಗುರಿಯನ್ನು ಬಿಬಿಎಂಪಿ ಹೊಂದಿದೆ. ಇದರ ಜೊತೆಗೆ ಸುಮಾರು ₹700 ಕೋಟಿಯಷ್ಟು ತ್ಯಾಜ್ಯ ನಿರ್ವಹಣೆ ಬಳಕೆದಾರರ ಶುಲ್ಕ ಸಂಗ್ರಹವಾಗುವ ಅಂದಾಜಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.