ಮಂಗಳವಾರ, ಆಗಸ್ಟ್ 3, 2021
21 °C

‘ಕೆಂಪೇಗೌಡರ ಕಾಲದ ಸ್ಮಾರಕ ರಕ್ಷಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಗರದಲ್ಲಿ ಕೆಂಪೇಗೌಡರ ಕಾಲದಲ್ಲಿ ನಿರ್ಮಾಣವಾಗಿರುವ ಸ್ಮಾರಕಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು’ ಎಂದು ‘ಬೆಂಗಳೂರು ನಿರ್ಮಾಪಕ ಕೆಂಪೇಗೌಡ ಕೇಂದ್ರ ಸಮಿತಿ’ ಒತ್ತಾಯಿಸಿದೆ. 

‘ಕೆಂಪೇಗೌಡರ ಮನೆದೇವರ ಹೆಸರಿನಲ್ಲಿ ನಿರ್ಮಿಸಿರುವ ಕೆಂಪಾಂಬುದಿ ಕೆರೆಯ ದಕ್ಷಿಣಕ್ಕೆ ಗವಿಪುರ ಗ್ರಾಮದ 4 ಎಕರೆ ಆಸ್ತಿ ಸರ್ಕಾರಕ್ಕೆ ಸೇರಿದೆ. ಈ ಸ್ಥಳದಲ್ಲಿ ಬೆಂಗಳೂರಿನ ನಾಲ್ಕು ಗಡಿಗೋಪುರಗಳ ಪೈಕಿ ಒಂದು ಗೋಪುರವಿದೆ. ಈ ಸ್ಥಳವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ’ ಎಂದು ಸಮಿತಿಯ ಮಾಜಿ ಉಪಾಧ್ಯಕ್ಷ ಸಿ. ಕಾಳಯ್ಯ ಹೇಳಿದ್ದಾರೆ. 

‘ಕೆಂಪಾಂಬುದಿ ಕೆರೆಯ ನಿರ್ವಹಣೆಯೂ ಸಮರ್ಪಕವಾಗಿಲ್ಲ. ಕೆರೆಯ ದಕ್ಷಿಣಕ್ಕೆ ಬಂಡಿ ಮಹಾಕಾಳಿ ದೇವರ ಹೆಸರಿನಲ್ಲಿ ಟ್ರಸ್ಟ್‌ ನಿರ್ಮಾಣ ಮಾಡಿ, ಈ ಆಸ್ತಿ ನಮಗೆ ಸೇರಬೇಕು ಎಂದು ಫಲಕ ಹಾಕಲಾಗಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡಲೇ ಈ ಫಲಕ ತೆಗೆಸಿ, ಸರ್ಕಾರದ ಜಾಗ ರಕ್ಷಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.