ಬಿಡಿಎ ವಿರುದ್ಧ ಫಲಾನುಭವಿಗಳ ಪ್ರತಿಭಟನೆ

7
ಫ್ಲ್ಯಾಟ್ ನಿರ್ಮಾಣ ಕಾಮಗಾರಿ ವಿಳಂಬ ಆರೋಪ

ಬಿಡಿಎ ವಿರುದ್ಧ ಫಲಾನುಭವಿಗಳ ಪ್ರತಿಭಟನೆ

Published:
Updated:

ಬೆಂಗಳೂರು: ನಾಲ್ಕು ವರ್ಷ ಕಳೆದರೂ ಗುಂಜೂರು ಗ್ರಾಮದಲ್ಲಿ ಬಿಡಿಎ ಫ್ಲ್ಯಾಟ್‌ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸದೆ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಗುಂಜೂರು ಬಿಡಿಎ ಸಮುಚ್ಚಯ ಫ್ಲ್ಯಾಟ್‌ಗಳ ಹಂಚಿಕೆದಾರರ ಹಿತರಕ್ಷಣಾ ವೇದಿಕೆ ಮತ್ತು ಬಿಡಿಎ ಸಮುಚ್ಚಯ ಫಲಾನುಭವಿಗಳು ಬಿಡಿಎ ವಸತಿ ಸಮುಚ್ಚಯ ಎದುರು ಪ್ರತಿಭಟನೆ ನಡೆಸಿದರು.

‘ಇಲ್ಲಿ 868 ಫ್ಲ್ಯಾಟ್‌ಗಳನ್ನು ನಿರ್ಮಿಸಲು ಬಿಡಿಎ 2014ರಲ್ಲಿ ಮಂಜೂರಾತಿ ನೀಡಿತ್ತು. 2015ರಲ್ಲಿ ಫ್ಲ್ಯಾಟ್‌ಗಳನ್ನು ಹಂಚಬೇಕಿತ್ತು. ಆದರೆ, ಇಲ್ಲಿಯವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದಕ್ಕೆ ಅಧಿಕಾರಿಗಳ ಧೋರಣೆಯೇ ಕಾರಣ’ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಈ ವೇಳೆ ಪಾಲಿಕೆಯ ವರ್ತೂರು ವಾರ್ಡ್‌ ಸದಸ್ಯೆ ಪುಷ್ಪಾ ಮಂಜುನಾಥ್ ಮಾತನಾಡಿ, ‘ಆದಷ್ಟೂ ಬೇಗ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡದೆ ಇದ್ದರೆ ಬಿಡಿಎ ಮುಖ್ಯ ಕಚೇರಿಗೆ ಮುತ್ತಿಗೆ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

‘ಕಾಮಗಾರಿಯ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರ ಅರ್ಧದಲ್ಲೇ ಕಾಮಗಾರಿ ನಿಲ್ಲಿಸಿದ್ದರು.ಬಳಿಕ ಗುತ್ತಿಗೆದಾರರ ಬದಲಿಸಲಾಗಿತ್ತು. ಜುಲೈ 25 ರೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ’ ಎಂದು ಬಿಡಿಎ ಎಂಜಿನಿಯರಿಂಗ್‌ ಅಧಿಕಾರಿ ಗೌಡಯ್ಯ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !