ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಲಹಂಕ: ಪುನೀತ್ ರಾಜಕುಮಾರ್ ಪುತ್ಥಳಿ ಅನಾವರಣ

Published 29 ಅಕ್ಟೋಬರ್ 2023, 16:35 IST
Last Updated 29 ಅಕ್ಟೋಬರ್ 2023, 16:35 IST
ಅಕ್ಷರ ಗಾತ್ರ

ಯಲಹಂಕ: ಹೆಬ್ಬಾಳದ ನೀರುಬಾವಿ ಕೆಂಪಣ್ಣ ಬಡಾವಣೆಯ ರಸ್ತೆಯೊಂದಕ್ಕೆ ‘ಪುನೀತ್‌ ರಾಜ್‌ಕುಮಾರ್ ರಸ್ತೆ’ ಎಂದು ನಾಮಕರಣ ಮಾಡಲಾಯಿತು. ಇದೇ ವೇಳೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಪುನೀತ್ ಪುತ್ಥಳಿಯನ್ನು ಅನಾವರಣಗೊಳಿಸಿದರು.

ನಂತರ ಮಾತನಾಡಿದ ಅವರು, ಪುನೀತ್ ರಾಜಕುಮಾರ್ ಈ ನಾಡು ಕಂಡ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದು, ಯಾವುದೇ ಪ್ರಚಾರ ಬಯಸದೆ ಸಾವಿರಾರು ಮಂದಿಗೆ ನೆರವು ನೀಡಿದ್ದರು. ಕಡಿಮೆ ಅವಧಿಯಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದ್ದ ಅವರು, ನಾಡಿನ ಯುವಜನತೆಗೆ ಅವರು ಕೆಲಸಗಳು ಆದರ್ಶ ಎಂದು ಹೇಳಿದರು.

ಪಾಲಿಕೆ ಮಾಜಿ ಸದಸ್ಯ ಎಂ.ಆನಂದಕುಮಾರ್, ಹೆಬ್ಬಾಳ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಎ.ರುದ್ರಪ್ಪ, ಸ್ಥಳೀಯ ಮುಖಂಡರಾದ ಎನ್.ನಾರಾಯಣ್, ಎಂ.ಪ್ರಸನ್ನಕುಮಾರ್, ಸಿ.ವೇಣು, ಕೃಷ್ಣಪ್ಪ, ರಮೇಶ್, ಎನ್.ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

ಬಿಜೆಪಿ ಕುತಂತ್ರ

‘ಹೆಬ್ಬಾಳದಲ್ಲಿ ಪತ್ತೆಯಾದ ನಕಲಿ ಗುರುತಿನ ಚೀಟಿ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಮತದಾರರ ನಕಲಿ ಗುರುತಿನ ಚೀಟಿ ಮೂಲಕ ಚುನಾವಣೆಯಲ್ಲಿ ಗೆಲ್ಲುವ ದೈನೆಸಿ ಸ್ಥಿತಿ ನನಗೆ ಬಂದಿಲ್ಲ’ ಎಂದು ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಅಂತಹ ಪರಿಸ್ಥಿತಿ ಬಂದರೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಇಂತಹ ಅಕ್ರಮಗಳನ್ನು ಎಸಗುವುದರಲ್ಲಿ ಬಿಜೆಪಿಯವರು ನಿಸ್ಸೀಮರಾಗಿದ್ದು ಇದೆಲ್ಲ ಅವರ ಕುತಂತ್ರ’ ಎಂದು ಕಿಡಿ ಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT