ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ನಿರ್ಮಾಣ ಕಾರ್ಯದಲ್ಲಿ ಗುಣಮಟ್ಟ ಅಗತ್ಯ: ಎನ್. ಶಿವಶೈಲಮ್

Published 13 ಜುಲೈ 2023, 14:02 IST
Last Updated 13 ಜುಲೈ 2023, 14:02 IST
ಅಕ್ಷರ ಗಾತ್ರ

ಬೆಂಗಳೂರು: ‘ಎಲ್ಲ ರೀತಿಯ ನಿರ್ಮಾಣಗಳಲ್ಲಿ ಎಂಜಿನಿಯರ್‌ಗಳು ಗುಣಮಟ್ಟ ಕಾಪಾಡುವುದು, ಉತ್ತಮ ಕೌಶಲದೊಂದಿಗೆ ವಿನ್ಯಾಸ ಮಾಡುವುದು ಅಗತ್ಯ’ ಎಂದು ರಾಜ್ಯ ಆಡಳಿತ ನ್ಯಾಯಮಂಡಳಿಯ ಆಡಳಿತಾತ್ಮಕ ಸದಸ್ಯ ಎನ್. ಶಿವಶೈಲಮ್ ಹೇಳಿದರು.

ಕಾಂಕ್ರೀಟ್ ಇನ್‍ಸ್ಟಿಟ್ಯೂಟ್ - ಬೆಂಗಳೂರು ಸೆಂಟರ್ (ಐಸಿಐ-ಬಿಇಎನ್‍ಸಿ) ಇದರ ದ್ವೈವಾರ್ಷಿಕ ಕಾರ್ಯಕ್ರಮ ‘ಕಾಂಕ್ರೀಟ್ ಪನೋರಮಾ ಮತ್ತು ಡೆಮಿನಾರ್’ ಅನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನಿರ್ಮಾಣ ಕಾರ್ಯಗಳನ್ನು ಸೂಕ್ಷ್ಮ, ಸಣ್ಣ, ಮಧ್ಯಮ ಮತ್ತು ಬೃಹತ್‌ ಎಂದು ವಿಭಾಗಿಸಲಾಗಿದೆ. ಎಲ್ಲ ಕಡೆಗಳಲ್ಲಿ ಕೆಲಸದ ವಾತಾವರಣವನ್ನು ಆಹ್ಲಾದಕರಗೊಳಿಸಬೇಕು ಮತ್ತು ಸುರಕ್ಷಿತ ಕ್ರಮಗಳನ್ನು ಕೈಗೊಂಡಿರಬೇಕು’ ಎಂದು ಸಲಹೆ ನೀಡಿದರು.

ಐಸಿಐ ಬೆಂಗಳೂರು ಕೇಂದ್ರದ ಕಾರ್ಯದರ್ಶಿ ಸುಹಾಸ್ ಆರ್. ಗೌರವ, ‘ಪ್ರಿಕಾಸ್ಟ್, ಪ್ರಿಸ್ಟ್ರೆಸ್, 3ಡಿ ಮುದ್ರಣದಂತಹ ನವೀನ ತಂತ್ರಜ್ಞಾನಗಳಿಗೆ ಬೇಡಿಕೆ ಹೆಚ್ಚಿದೆ. ಪರಿಸರಕ್ಕೆ ಪೂರಕವಾದ ತಂತ್ರಜ್ಞಾನಗಳನ್ನು ಜನ ಬಯಸುತ್ತಾರೆ’ ಎಂದು ಮಾಹಿತಿ ನೀಡಿದರು.

ಐಸಿಐ ಬೆಂಗಳೂರು ಕೇಂದ್ರದ ಅಧ್ಯಕ್ಷ ಎಚ್.ಆರ್. ಗಿರೀಶ್, ಸಂಘಟನಾ ಸಮಿತಿ ಅಧ್ಯಕ್ಷ ಆರ್.ಬಿ.ವಿ. ರವೀಂದ್ರನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT