ದೇವನಹಳ್ಳಿ: ‘ಕೆ.ಆರ್.ಎಸ್ ಅಣೆಕಟ್ಟುಸುರಕ್ಷಿತವಾಗಿದೆ. ಈ ಬಗ್ಗೆ ಗಣಿ ಇಲಾಖೆ ಸಚಿವರು ಮತ್ತು ಸಂಬಂಧಪಟ್ಟ ಎಂಜಿನಿಯರ್‌ಗಳಿಂದ ಮಾಹಿತಿ ಪಡೆಯಲಾಗಿದೆ. ಯಾವುದೇ ಅನುಮಾನ ಇದ್ದರೆ ಸರ್ಕಾರದೊಂದಿಗೆ ಚರ್ಚೆ ನಡೆಸಬೇಕೆ ಹೊರತು, ಈ ವಿಚಾರವನ್ನು ದೊಡ್ಡವಿವಾದ ಮಾಡುವುದು ಬೇಡ‘ ಎಂದು ಕಂದಾಯ ಸಚಿವ ಆರ್.ಅಶೊಕ ಅವರು ಸಂಸದೆ ಸುಮಲತಾ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನ ರಾಜ್ಯಪಾಲಥಾವರಚಂದ್ ಗೆಹಲೋತ್ ಅವರನ್ನು ಬರಮಾಡಿಕೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೆ.ಆರ್.ಎಸ್ ಅಣೆಕಟ್ಟು ಬಿರುಕು ಬಿಟ್ಟಿದೆ ಎನ್ನುವ ವಿಚಾರ ಕುರಿತು ಸರ್ಕಾರ ಏನನ್ನೂ ಹೇಳುತ್ತಿಲ್ಲ ಎಂದು ಮಾಧ್ಯಮಗಳಲ್ಲಿ ವರದಿ ಆಗುತ್ತಿದೆ. ಅಣೆಕಟ್ಟು ಸುರಕ್ಷಿತವಾಗಿದೆ. ಈ ಹಿಂದೆ ದುರಸ್ತಿ ಮಾಡಲಾಗಿದೆ.ಈ ಬಗ್ಗೆ ನೀರಾವರಿ ಇಲಾಖೆ ಎಂಜಿನಿಯರ್‌ಗಳು ಸ್ಪಷ್ಟಪಡಿಸಿದ್ದಾರೆ ಎಂದರು.

’ಈ ವಿಷಯ ರಾಜಕೀಯ ದಾಳವಾಗಬಾರದು. ಯಾರ ಮನಸ್ಸಿಗೂ ನೋವುಂಟು ಮಾಡುವ ಕೆಲಸವಾಗಬಾರದು. ಮಂಡ್ಯ, ಮೈಸೂರು, ಬೆಂಗಳೂರಿಗೆ ಇದು ಜೀವನದಿ. ತಜ್ಞರು ಮಾತ್ರ ಈ ಬಗ್ಗೆ ಮಾತನಾಡಲು ಅಧಿಕಾರವಿದೆ. ಬೇರೆ ಯಾರೂ ಮಾತನಾಡಬಾರದು. ಅಣೆಕಟ್ಟು ವಿಚಾರ ಮುಂದಿಟ್ಟುಕೊಂಡು ಹಿಂದಿನ ಲೋಕಸಭೆ ಚುನಾವಣೆಯ ಪ್ರತೀಕಾರ ತೆಗೆದುಕೊಳ್ಳುವ ಕೆಲಸ ನಡೆದಿದೆ ಅಷ್ಟೇ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.