ಶುಕ್ರವಾರ, ಸೆಪ್ಟೆಂಬರ್ 25, 2020
28 °C

ನಗರದಲ್ಲಿ ಮಳೆತೀವ್ರ ಚಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದಕ್ಷಿಣ ಒಳನಾಡು ಭಾಗಗಳಲ್ಲಿ ಮುಂಗಾರು ಚುರುಕುಗೊಂಡಿರುವಂತೆ, ನಗರದ ವಿವಿಧ ಕಡೆಗಳಲ್ಲಿ ಗುರುವಾರ ಮಳೆ ಸುರಿಯಿತು. ಜೊತೆಗೆ ಗಾಳಿಯೂ ಜೋರಾಗಿ ಬೀಸಿದ ಪರಿಣಾಮ ಚಳಿಯ ತೀವ್ರತೆ ಹೆಚ್ಚಿದೆ.

ಜಯಮಹಲ್‌, ಶಿವಾಜಿನಗರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಬಿರುಸಿನ ವರ್ಷಧಾರೆಯಾಯಿತು. ಆದರೆ, ಬಹುತೇಕ ಕಡೆ ಬಿಟ್ಟು ಬಿಟ್ಟು ತುಂತುರು ಮಳೆ ಸುರಿಯಿತು. ಹೀಗಾಗಿ ತಾಪಮಾನದಲ್ಲಿ ಇಳಿಕೆ ಉಂಟಾಯಿತು.

ಕೆಲವು ದಿನಗಳಿಂದ ನಗರದ ಹವಾಮಾನ ಸಂಪೂರ್ಣ ಬದಲಾಗಿದೆ. ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ತುಂತುರು ಮಳೆ ಸುರಿಯುತ್ತಿದೆ. ಕೇಂದ್ರ ಭಾಗಗಳಿಗಿಂತ ಹೊರವಲಯಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಮಳೆ ಸುರಿದಿದೆ. ಮುಂಗಾರು ಪ್ರಬಲಗೊಂಡಿರುವುದರಿಂದ ನಗರದಲ್ಲಿ ಇನ್ನೂ ಎರಡು ದಿನ ಜೋರಾದ ಗಾಳಿ ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಳೆಯಿಂದಾಗಿ ತಾಪಮಾನ ಕುಸಿದು, ಗುರುವಾರ ಕೇಂದ್ರ ಭಾಗಗಳಲ್ಲಿ 24.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಎಚ್‍ಎಎಲ್‍ನಲ್ಲಿ 26 ಡಿಗ್ರಿ, ಕೆಐಎಎಲ್‍ನಲ್ಲಿ 27.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಎಲ್ಲಿ, ಎಷ್ಟು ಮಳೆ?: ಮಾಚೋಹಳ್ಳಿ, ಕಡಬಗೆರೆ 21 ಮಿ.ಮೀ., ಕಿತ್ತನಹಳ್ಳಿ 20 ಮಿ.ಮೀ., ಸಿದ್ದನಹೊಸಹಳ್ಳಿ, ಹೊಸ್ಕೂರು 9 ಮಿ.ಮೀ., ಅರಕೆರೆ 8 ಮಿ.ಮೀ., ಗೋಪಾಲಪುರ, ಮಾದನಾಯಕನಹಳ್ಳಿ, ಮಾದಾವರ, ಐಟಿಸಿ ಜಾಲ 7 ಮಿ.ಮೀ., ಹೆಸರಘಟ್ಟ 5 ಮಿ.ಮೀ. ಮಳೆ ಸುರಿದಿದೆ.

ಯಶವಂತಪುರ, ನಂದಿನಿ ಲೇಔಟ್, ಜಾಲಹಳ್ಳಿ, ರಾಜಾಜಿನಗರ, ಜಯನಗರ, ಬಿಟಿಎಂ ಲೇಔಟ್, ಕೋರಮಂಗಲ, ಮೆಜೆ
ಸ್ಟಿಕ್, ಎಚ್‍ಎಸ್‍ಆರ್ ಲೇಔಟ್ ಮತ್ತಿತರ ಕಡೆಗಳಲ್ಲಿ ತುಂತುರು ಮಳೆ ಸುರಿದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು