ಶುಕ್ರವಾರ, ಮೇ 27, 2022
28 °C

ಬೆಂಗಳೂರು ನಗರದಲ್ಲಿ ಬಿಟ್ಟು ಬಿಟ್ಟು ಸುರಿದ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಹಲವು ದಿನಗಳಿಂದ ಮೋಡ ಕವಿದ ವಾತಾವರಣ ಹೆಚ್ಚಿದ್ದು, ಆಗಾಗ ಬಿಡುವು ಕೊಡುತ್ತಾ ಮಳೆ ಸುರಿಯುತ್ತಿದೆ. ನಗರದ ಹಲವೆಡೆ ಶನಿವಾರವೂ ಮಳೆಯಾಯಿತು.

ನಗರದ ಹಲವೆಡೆ ಶನಿವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಬಿಸಿಲು ಇತ್ತು. ಆಗಾಗ ಮೋಡ ಕವಿದ ವಾತಾವರಣ ಕಂಡುಬಂತು. ಸಂಜೆ ವೇಳೆ ತುಂತುರು ಮಳೆ ಆರಂಭವಾಗಿ, ರಾತ್ರಿ ಜೋರಾಗಿ ಸುರಿಯಿತು. ಜೋರು ಗಾಳಿ ಹಾಗೂ ಗುಡುಗು– ಸಿಡಿಲಿನ ಅಬ್ಬರವೂ ಇತ್ತು.

ರಾಜರಾಜೇಶ್ವರಿನಗರ, ಜ್ಞಾನಭಾರತಿ, ಕೆಂಗೇರಿ, ನಾಯಂಡನ ಹಳ್ಳಿ, ಬನಶಂಕರಿ, ಕುಮಾರಸ್ವಾಮಿ ಲೇಔಟ್, ಪುಟ್ಟೇನಹಳ್ಳಿ, ಜೆ.ಪಿ.ನಗರ, ಜಯನಗರ, ಬಸವನಗುಡಿ, ಗಿರಿನಗರ, ಹನುಮಂತನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಕಾಟನ್‌ಪೇಟೆ, ಮೆಜೆಸ್ಟಿಕ್, ಗಾಂಧಿನಗರ ಹಾಗೂ ಸುತ್ತಮುತ್ತ ತುಂತುರು ಮಳೆ ಆಯಿತು.

ಶಿವಾಜಿನಗರ, ಅಶೋಕನಗರ, ಎಂ.ಜಿ. ರಸ್ತೆ, ಕೋರಮಂಗಲ, ಮಡಿವಾಳ, ಲಾಲ್‌ಬಾಗ್, ವಿಲ್ಸನ್‌ ಗಾರ್ಡನ್, ಶಾಂತಿನಗರ, ಎಚ್ಎಸ್‌ಆರ್‌ ಲೇಔಟ್ ಹಾಗೂ ಇತರೆರೆ ಮಳೆ ಸುರಿಯಿತು.

‘ನಗರದಲ್ಲಿ ಬಹುತೇಕ ಕಡೆ ಸಂಜೆಯಿಂದ ರಾತ್ರಿಯವರೆಗೂ ಉತ್ತಮ ಮಳೆ ಆಗಿದೆ. ಕೆಲ ರಸ್ತೆಗಳಲ್ಲಿ ಮರದ ಕೊಂಬೆಗಳು ಬಿದ್ದಿದ್ದ ದೂರುಗಳು ಬಂದಿದ್ದವು. ಸ್ಥಳೀಯರೇ ಅವುಗಳನ್ನು ತೆರವು ಮಾಡಿದ್ದಾರೆ. ಅದನ್ನು ಹೊರತುಪಡಿಸಿ ಯಾವುದೇ ದೂರುಗಳು ಬಂದಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು