ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Rain In Bangalore

ADVERTISEMENT

ನಿರಂತರ ಮಳೆ: ಜನಜೀವನ ಅಸ್ತವ್ಯಸ್ತ

ಪ್ರಜಾವಾಣಿ ವಾರ್ತೆ ಬೆಂಗಳೂರು: ನಗರದಲ್ಲಿ ಭಾನುವಾರ ದಿನವಿಡೀ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿತ್ತು. ಶನಿವಾರ ರಾತ್ರಿಯೂ ಗಾಳಿಯ ರಭಸ ಜೋರಾಗಿತ್ತು. ಚಳಿ ತೀವ್ರತೆಯಿಂದ ಜನರು ಮನೆಯಿಂದ ಹೊರಬರಲು ಸಾಧ್ಯವಾಗಲಿಲ್ಲ. ಭಾನುವಾರ ರಜೆಯಿದ್ದರಿಂದ ಬಹುತೇಕರು ಮನೆಯಲ್ಲಿ ಕಾಲಕಳೆದರು. ವ್ಯಾಪಾರ ಸಹ ಕ್ಷೀಣಿಸಿತ್ತು. ಬೀದಿಬದಿಯ ವ್ಯಾಪಾರಿಗಳು ತೊಂದರೆ ಅನುಭವಿಸಿದರು. ನಗರದ ವಿವಿಧೆಡೆ ನಿರಂತರ ಮಳೆಯಾದರೆ ಕೆಲವು ಪ್ರದೇಶದಲ್ಲಿ ಬಿಟ್ಟುಬಿಟ್ಟು ಮಳೆ ಸುರಿಯಿತು. ರಸ್ತೆಗಳಲ್ಲಿ ಬಿದ್ದಿದ್ದ ಗುಂಡಿಗಳಲ್ಲಿ ಮಳೆಯ ನೀರು ಸಂಗ್ರಹಗೊಂಡು ಬೈಕ್‌ ಸವಾರರು ಪರದಾಡಿದರು.
Last Updated 11 ಡಿಸೆಂಬರ್ 2022, 21:02 IST
ನಿರಂತರ ಮಳೆ: ಜನಜೀವನ ಅಸ್ತವ್ಯಸ್ತ

ಮಳೆ ಹಾನಿ ಅಧ್ಯಯನಕ್ಕೆ ಕೇಂದ್ರದಿಂದ 3 ತಂಡ; ಸೆ.7 ರಿಂದ 9 ಜಿಲ್ಲೆಗಳಿಗೆ ಭೇಟಿ

ರಾಜ್ಯದಲ್ಲಿ ನಿರಂತರ ಮಳೆಯಿಂದ ಆಗಿರುವ ಹಾನಿಯನ್ನು ಅಧ್ಯಯನ ನಡೆಸಲು ಕೇಂದ್ರದ ಹಿರಿಯ ಅಧಿಕಾರಿಗಳ ಮೂರು ತಂಡಗಳು ಬರಲಿದ್ದು, ಸೆ.7 ರಿಂದ ಸೆ. 9 ರವರೆಗೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಲಿವೆ.
Last Updated 5 ಸೆಪ್ಟೆಂಬರ್ 2022, 10:57 IST
ಮಳೆ ಹಾನಿ ಅಧ್ಯಯನಕ್ಕೆ ಕೇಂದ್ರದಿಂದ 3 ತಂಡ; ಸೆ.7 ರಿಂದ 9 ಜಿಲ್ಲೆಗಳಿಗೆ ಭೇಟಿ

ಬೆಂಗಳೂರು ನಗರದಲ್ಲಿ ಬಿಟ್ಟು ಬಿಟ್ಟು ಸುರಿದ ಮಳೆ

ಬೆಂಗಳೂರು: ನಗರದಲ್ಲಿ ಹಲವು ದಿನಗಳಿಂದ ಮೋಡ ಕವಿದ ವಾತಾವರಣ ಹೆಚ್ಚಿದ್ದು, ಆಗಾಗ ಬಿಡುವು ಕೊಡುತ್ತಾ ಮಳೆ ಸುರಿಯುತ್ತಿದೆ. ನಗರದ ಹಲವೆಡೆ ಶನಿವಾರವೂ ಮಳೆಯಾಯಿತು. ನಗರದ ಹಲವೆಡೆ ಶನಿವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಬಿಸಿಲು ಇತ್ತು. ಆಗಾಗ ಮೋಡ ಕವಿದ ವಾತಾವರಣ ಕಂಡುಬಂತು. ಸಂಜೆ ವೇಳೆ ತುಂತುರು ಮಳೆ ಆರಂಭವಾಗಿ, ರಾತ್ರಿ ಜೋರಾಗಿ ಸುರಿಯಿತು. ಜೋರು ಗಾಳಿ ಹಾಗೂ ಗುಡುಗು– ಸಿಡಿಲಿನ ಅಬ್ಬರವೂ ಇತ್ತು. ರಾಜರಾಜೇಶ್ವರಿನಗರ, ಜ್ಞಾನ ಭಾರತಿ, ಕೆಂಗೇರಿ, ನಾಯಂಡನ ಹಳ್ಳಿ, ಬನಶಂಕರಿ, ಕುಮಾರಸ್ವಾಮಿ ಲೇಔಟ್, ಪುಟ್ಟೇನಹಳ್ಳಿ, ಜೆ.ಪಿ.ನಗರ, ಜಯನಗರ, ಬಸವನಗುಡಿ, ಗಿರಿನಗರ, ಹನುಮಂತನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಕಾಟನ್‌ಪೇಟೆ, ಮೆಜೆಸ್ಟಿಕ್, ಗಾಂಧಿನಗರ ಹಾಗೂ ಸುತ್ತಮುತ್ತ ತುಂತುರು ಮಳೆ ಆಯಿತು.
Last Updated 14 ಮೇ 2022, 22:00 IST
ಬೆಂಗಳೂರು ನಗರದಲ್ಲಿ ಬಿಟ್ಟು ಬಿಟ್ಟು ಸುರಿದ ಮಳೆ

ಮಳೆಗಾಲದ ಸಮಸ್ಯೆಗಳಿಗೆ ಕಿವಿಯಾದ ಬಿಬಿಎಂಪಿ ಮುಖ್ಯ ಆಯುಕ್ತ

ಬೊಮ್ಮನಹಳ್ಳಿ ವಲಯದಲ್ಲಿ ಮಳೆಗಾಲದಲ್ಲಿ ಸಮಸ್ಯೆ ಎದುರಾಗುವ ಪ್ರಮುಖ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸ್ಥಳೀಯರ ಅಹವಾಲು ಆಲಿಸಿದರು.
Last Updated 12 ಮೇ 2022, 14:06 IST
ಮಳೆಗಾಲದ ಸಮಸ್ಯೆಗಳಿಗೆ ಕಿವಿಯಾದ ಬಿಬಿಎಂಪಿ ಮುಖ್ಯ ಆಯುಕ್ತ

ರಾಜ್ಯದ ವಿವಿಧೆಡೆ ಭಾರಿ ಮಳೆ: ಧಗೆಯ ವಾತಾವರಣಕ್ಕೆ ತಂಪೆರೆದ ವರುಣ

ಬೆಂಗಳೂರು: ರಾಜ್ಯದ ಹಲವು ಕಡೆ ಭಾನುವಾರ ಗುಡುಗು–ಸಿಡಿಲು ಸಹಿತ ಜೋರು ಮಳೆ ಸುರಿಯಿತು.
Last Updated 1 ಮೇ 2022, 19:31 IST
ರಾಜ್ಯದ ವಿವಿಧೆಡೆ ಭಾರಿ ಮಳೆ: ಧಗೆಯ ವಾತಾವರಣಕ್ಕೆ ತಂಪೆರೆದ ವರುಣ

ಬೆಂಗಳೂರು: ಧಾರಾಕಾರ ಮಳೆ, ಶಾಲೆಗಳಿಗೆ ನ.19ಕ್ಕೆ ರಜೆ

ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಬೆಂಗಳೂರು ನಗರ ಜಿಲ್ಲೆಯ ಶಾಲೆಗಳಿಗೆ ನ.19ರಂದು ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ
Last Updated 18 ನವೆಂಬರ್ 2021, 15:22 IST
ಬೆಂಗಳೂರು: ಧಾರಾಕಾರ ಮಳೆ, ಶಾಲೆಗಳಿಗೆ ನ.19ಕ್ಕೆ ರಜೆ

ಬೆಂಗಳೂರು: ಶನಿವಾರ ಸಂಜೆಯ ನಂತರ ಸುರಿದ ಧಾರಾಕಾರ ಮಳೆ

ವಾಯುಭಾರ ಕುಸಿತದಿಂದಾಗಿ ನಗರದ ಹಲವೆಡೆ ಶನಿವಾರ ರಾತ್ರಿ ಧಾರಾಕಾರ ಮಳೆ ಸುರಿಯಿತು. ಮುಂಜಾನೆಯಿಂದಲೇ ಆಗಸದಲ್ಲಿ ಕಾರ್ಮೋಡಗಳು ದಟ್ಟೈಸಿದ್ದವು. ಹೀಗಾಗಿ ಚಳಿಯ ವಾತಾವರಣವೂ ನಿರ್ಮಾಣವಾಗಿತ್ತು.
Last Updated 13 ನವೆಂಬರ್ 2021, 19:01 IST
ಬೆಂಗಳೂರು: ಶನಿವಾರ ಸಂಜೆಯ ನಂತರ ಸುರಿದ ಧಾರಾಕಾರ ಮಳೆ
ADVERTISEMENT

ಬೆಂಗಳೂರು: ಜಿಟಿ ಜಿಟಿ ಮಳೆ; ಮೈನಡುಗಿಸಿದ ಚಳಿ

ನಗರದಲ್ಲಿ ಶುಕ್ರವಾರವೂ ಜಿಟಿ ಜಿಟಿ ಮಳೆ ಸುರಿಯಿತು. ಹೀಗಾಗಿ ದಿನವಿಡೀ ಚಳಿಯ ವಾತಾವರಣ ನಿರ್ಮಾಣವಾಗಿತ್ತು.
Last Updated 12 ನವೆಂಬರ್ 2021, 19:45 IST
ಬೆಂಗಳೂರು: ಜಿಟಿ ಜಿಟಿ ಮಳೆ; ಮೈನಡುಗಿಸಿದ ಚಳಿ

7 ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್‌’ ಮುಂದುವರಿಕೆ: ನ.13ರ ನಂತರ ತಗ್ಗುವ ಸೂಚನೆ

ತಮಿಳುನಾಡು ಹಾಗೂ ಆಂಧ್ರ ಪ್ರದೇಶ ಕರಾವಳಿಗಳಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದ ಪ್ರಬಲತೆ ತಗ್ಗಿರುವುದರಿಂದ ರಾಜ್ಯದಲ್ಲಿ ನ.13ರಿಂದ ಮಳೆ ತಗ್ಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Last Updated 12 ನವೆಂಬರ್ 2021, 19:31 IST
7 ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್‌’ ಮುಂದುವರಿಕೆ: ನ.13ರ ನಂತರ ತಗ್ಗುವ ಸೂಚನೆ

ತುಂತುರು ಮಳೆ: ಥಂಡಿಗೆ ಥರಗುಟ್ಟಿದ ಜನ, ಮಲೆನಾಡಾದ ಬಯಲುಸೀಮೆ

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಕಾರಣ ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿಬುಧವಾರ ರಾತ್ರಿಯಿಂದ ಜಿಟಿ ಜಿಟಿ ಮಳೆ ಸುರಿಯುತ್ತಿದ್ದುಬಯಲುಸೀಮೆಯ ಜಿಲ್ಲೆಗಳು ವಾತಾವರಣ ಮಲೆನಾಡನ್ನು ನೆನಪಿಸುತ್ತಿದೆ.
Last Updated 11 ನವೆಂಬರ್ 2021, 19:32 IST
ತುಂತುರು ಮಳೆ: ಥಂಡಿಗೆ ಥರಗುಟ್ಟಿದ ಜನ, ಮಲೆನಾಡಾದ ಬಯಲುಸೀಮೆ
ADVERTISEMENT
ADVERTISEMENT
ADVERTISEMENT