ಬುಧವಾರ, ಡಿಸೆಂಬರ್ 8, 2021
18 °C

ಬೆಂಗಳೂರು: ತಗ್ಗಿದ್ದ ಮಳೆ; ಇಂದು ಅಬ್ಬರಿಸುವ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ತಮಿಳುನಾಡಿನ ಕರಾವಳಿ ಪ್ರದೇಶದಲ್ಲಿ ಉಂಟಾಗಿದ್ದ ಮೇಲ್ಮೈ ಸುಳಿಗಾಳಿ ದೂರ ಸರಿದಿರುವುದರಿಂದ ಬೆಂಗಳೂರು ನಗರ ಭಾಗದಲ್ಲಿ ಎರಡು ದಿನಗಳಿಂದ ಮಳೆ ತಗ್ಗಿದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.

‘ಕಳೆದ ವಾರ ತಮಿಳುನಾಡಿನ ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಸಂಭವಿಸಿದ್ದರಿಂದ ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷಿಸಲಾಗಿತ್ತು. ಸೂಚನೆಯಂತೆ ಬೆಂಗಳೂರಿಗೆ ‘ಯೆಲ್ಲೊ ಅಲರ್ಟ್‌’ ಕೂಡ ಘೋಷಿಸಲಾಗಿತ್ತು. ಆದರೆ, ಮೇಲ್ಮೈ ಸುಳಿಗಾಳಿ ತಮಿಳುನಾಡು ಕರಾವಳಿಯಿಂದ ದೂರ ಸರಿದಿದೆ. ಹಾಗಾಗಿ, ಬೆಂಗಳೂರಿನಲ್ಲಿ ಎರಡು ದಿನಗಳಿಂದ ಮಳೆ ದಿಢೀರ್‌ ತಗ್ಗಿದೆ’ ಎಂದು ಹವಾಮಾನ ತಜ್ಞ ಸದಾನಂದ ಅಡಿಗ ತಿಳಿಸಿದರು.

‘ಈಗ ವಾಯುಭಾರ ಕುಸಿತದ ವಿಸ್ತೃತ ಭಾಗ ಮುಂದುವರಿದಿರುವುದರಿಂದ ಬೆಂಗಳೂರಿನಲ್ಲಿ ಶನಿವಾರ (ಅ.23) ಮತ್ತೆ ಭಾರಿ ಮಳೆಯಾಗುವ ಮುನ್ಸೂಚನೆಗಳು ಕಂಡು ಬಂದಿವೆ. ಭಾನುವಾರದಿಂದ ಮಳೆ ಪ್ರಮಾಣ ಮತ್ತೆ ಕಡಿಮೆಯಾಗುವ ಸಾಧ್ಯತೆಗಳೂ ಇವೆ’ ಎಂದು ವಿವರಿಸಿದರು.

‘ಗುಡುಗು, ಸಿಡಿಲು ಸಹಿತ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಬೆಂಗಳೂರಿನಲ್ಲಿ ಶನಿವಾರ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ. ಹವಾಮಾನ ವೈಪರೀತ್ಯದಿಂದ ಮಳೆ ಏರುಪೇರಾಗಬಹುದು’ ಎಂದೂ ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು