ಬೆಂಗಳೂರು: ‘ಕುವೆಂಪು ಅವರು ಸಾಹಿತ್ಯದ ಮೂಲಕ ಮೌಲ್ಯಗಳನ್ನು ದಾಟಿಸಿದರೆ, ರಾಜ್ಕುಮಾರ್ ಸಿನಿಮಾದ ಮೂಲಕ ಜನಸಾಮಾನ್ಯರಿಗೆ ಮೌಲ್ಯ ತಲುಪಿಸಿದರು. ಬಡವರ್ಗದ ಜನರಿಗೆ ಆತ್ಮವಿಶ್ವಾಸದಿಂದ ಬದುಕುವ ಮಾರ್ಗವನ್ನು ಹೇಳಿಕೊಟ್ಟರು’ ಎಂದು ಸಾಹಿತಿ ಮಂಜುನಾಥ ಅದ್ದೆ ಹೇಳಿದರು.

ಅವರ ‘ಬಡವರ ರಾಜಕುಮಾರ’ ಕೃತಿಯ ಆಧಾರದಲ್ಲಿ ಬೆಂಗಳೂರು ಚಿತ್ರೋತ್ಸವದಲ್ಲಿ ಗುರುವಾರ ನಡೆದ ‘ತಳಸಮುದಾಯಗಳ ನಾಯಕ’ ಗೋಷ್ಠಿಯಲ್ಲಿ ಅದ್ದೆ ಮಾತನಾಡಿದರು.

‘ಈಗಿನ ಸಿನಿಮಾಗಳಲ್ಲಿ ವಾಸ್ತವ ಬದುಕು ಇರುವುದಿಲ್ಲ, ಸಾವಯವ ಚಿಂತನೆ ಇರುವುದಿಲ್ಲ. ಆದರೆ, ರಾಜ್ಕುಮಾರ್ ಅವರು ವಾಸ್ತವ ಮತ್ತು ವ್ಯಾಪಾರ ಎರಡನ್ನೂ ಸರಿತೂಗಿಸಿಕೊಂಡು ಹೋದ ಮಾದರಿ ವ್ಯಕ್ತಿತ್ವ. ಕಾಳಜಿ ಮತ್ತು ತುಡಿತ ಇಟ್ಟುಕೊಂಡು, ಸಮಾಜ ಕಟ್ಟುವ ಕಡೆಗೆ ಕೆಲಸ ಮಾಡಿದರು. ಬಡವರಲ್ಲಿ ಸ್ವಾಭಿಮಾನ, ಘನತೆ ಹೆಚ್ಚಿಸಿದರು’ ಎಂದು ವಿವರಿಸಿದರು.

ಪತ್ರಕರ್ತೆ ಮಂಜುಳಾ ಹುಲಿಕುಂಟೆ ಮಾತನಾಡಿ, ‘ತಳ ಸಮುದಾಯದವರು ಕೀಳರಿಮೆ ಮೀರಬೇಕಾದರೆ ಅವರಿಗೆ ಇರುವ ಶಕ್ತಿ ಪ್ರಾಮಾಣಿಕತೆ ಎಂಬ ಪ್ರಜ್ಞೆಯನ್ನು ರಾಜ್ಕುಮಾರ್ ಮೂಡಿಸಿದರು. ಅವರ ಬದುಕೇ ಒಂದು ಪಾಠವಾಗಿತ್ತುʼ ಎಂದು ಹೇಳಿದರು.

ಪ್ರಜಾವಾಣಿ ‘ಅಭಿಮತ’ ಸಂಪಾದಕ ರಘುನಾಥ ಚ.ಹ. ಮಾತನಾಡಿ, ‘ಕರ್ನಾಟಕ ಏಕೀಕರಣಗೊಂಡಾಗ ರಾಜಕೀಯವಾಗಿ, ಭೌಗೋಳಿಕವಾಗಿ ಏಕೀಕರಣವಾಗಿತ್ತು. ಆದರೆ, ಸಾಂಸ್ಕೃತಿಕ ಏಕೀಕರಣವಾಗಿದ್ದು ರಾಜ್ಕುಮಾರ್ ಅವರಿಂದ. ಕುವೆಂಪು ಪ್ರಜ್ಞಾಪೂರ್ವಕವಾಗಿ ತಾತ್ವಿಕತೆ ಕಟ್ಟಿದರೆ, ರಾಜ್ಕುಮಾರ್ ಅಪ್ರಜ್ಞಾಪೂರ್ವಕವಾಗಿ ತಾತ್ವಿಕತೆ ಹೇಳಿಕೊಟ್ಟರು. ಕುವೆಂಪು ಬೌದ್ಧಿಕ ಪ್ರತಿನಿಧಿಯಾದರೆ, ರಾಜ್ಕುಮಾರ್ ಜನಪದರ ಪ್ರತಿನಿಧಿ. ಅವರ ಸಿನಿಮಾಗಳು ನಮಗೆ ಸಾಂವಿಧಾನಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಹೇಗೆ ಎಂಬುದನ್ನು ಕಲಿಸಿದವು' ಎಂದು ಹೇಳಿದರು.

ಉಪನ್ಯಾಸಕ ಮುರಳಿಮೋಹನ್ ಕಾಟಿ ಸಂವಾದ ನಿರ್ವಹಣೆ ಮಾಡಿದರು.

ಬೌನ್ಸರ್ಗಳ ಜೊತೆ ಬರುತ್ತಿರಲಿಲ್ಲ:

ಸಾಧು ಕೋಕಿಲ ರಾಜ್ಕುಮಾರ್ ಸುತ್ತಮುತ್ತ ಈಗಿನವರ ತರಹ ಬೌನ್ಸರ್ಗಳು ಇರುತ್ತಿರಲಿಲ್ಲ. ಸುತ್ತ ಅಭಿಮಾನಿಗಳು ಇರುತ್ತಿದ್ದರು ಎಂದು ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ತಿಳಿಸಿದರು. ಅವರು ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು ಅವರನ್ನು ನೋಡಲು ಇಡೀ ಕರ್ನಾಟಕವೇ ಕಾಯುತ್ತಿತ್ತು. ರಾಜ್ಕುಮಾರ್ ಅವರು ಹಾಡಲು ತೆಗೆದುಕೊಳ್ಳುತ್ತಿದ್ದ ಹಣವು ಬಡವರಿಗೆ ಸಂಬಂಧಿಸಿದ ಟ್ರಸ್ಟ್ಗೆ ಹೋಗುತ್ತಿತ್ತು. ಅದನ್ನು ಅವರು ಯಾವತ್ತೂ ಹೇಳಿಕೊಂಡಿಲ್ಲ ಎಂದು ನೆನಪು ಮಾಡಿಕೊಂಡರು. ‘ಯಾವುದೇ ಸಾಂಸ್ಕೃತಿಕ ಘಟಕಕ್ಕೆ ಹೋದರೂ ಕುವೆಂಪು ಅವರ ಜೊತೆ ರಾಜ್ಕುಮಾರ್ ಅವರನ್ನೂ ನೋಡಬಹುದು. ಅವರು ಎಲ್ಲರಿಗೂ ಸಲ್ಲುವವರು. ನಾನು ಸಂಗೀತ ಸಂಯೋಜಿಸಿದ ಕೆಲವು ಹಾಡುಗಳನ್ನು ಅವರು ಹಾಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.