‘ಪ್ರತಿಮೆಗಳ ಮೂಲಕ ಭಗವಂತನ ಆರಾಧನೆ’
‘ದೇವಾಲಯಗಳು ಭಾರತೀಯ ಸಂಸ್ಕೃತಿಯ ರಕ್ಷಣೆಯ ಕೇಂದ್ರಬಿಂದುಗಳಾಗಿವೆ. ಪ್ರತಿಮೆಗಳ ಆರಾಧನೆ ಬಗ್ಗೆ ಹಿಂದೂ ಸಮಾಜದ ಕೆಲವರಲ್ಲಿ ಆಕ್ಷೇಪವಿದೆ. ವಸ್ತು ಸಂಗ್ರಹಾಲಯದಲ್ಲಿ ಸಾವಿರಾರು ಪ್ರತಿಮೆಗಳಿದ್ದರೂ ಅಲ್ಲಿಗೆ ಹೋಗಿ ಯಾರೂ ಪೂಜಿಸುವುದಿಲ್ಲ. ಆಗಮ ಶಾಸ್ತ್ರದ ಅನುಸಾರ ಪ್ರತಿಮೆಗಳಲ್ಲಿ ಭಗವಂತನ ಸನ್ನಿಧಾನ ತುಂಬಿದ ಬಳಿಕವೇ ಆರಾಧನೆ ನಡೆಯುತ್ತದೆ. ಆದ್ದರಿಂದ ಪ್ರತಿಮೆಗಳ ಮೂಲಕ ಭಗವಂತನನ್ನು ಆರಾಧಿಸುತ್ತಿದ್ದೇವೆ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.