ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ರಂಗ ಶಂಕರ ನಾಟಕೋತ್ಸವ ನಾಳೆಯಿಂದ

Published 25 ಅಕ್ಟೋಬರ್ 2023, 15:27 IST
Last Updated 25 ಅಕ್ಟೋಬರ್ 2023, 15:27 IST
ಅಕ್ಷರ ಗಾತ್ರ

ಬೆಂಗಳೂರು: ರಂಗ ಶಂಕರ ವಾರ್ಷಿಕ ನಾಟಕೋತ್ಸವವು ಇದೇ 27ರಿಂದ ನ.1ರವರೆಗೆ ವೈಟ್‌ಫೀಲ್ಡ್‌ನಲ್ಲಿರುವ ಜಾಗೃತಿ ಥಿಯೇಟರ್‌ ಹಾಗೂ ಜೆ.ಪಿ.ನಗರದಲ್ಲಿರುವ ರಂಗ ಶಂಕರದಲ್ಲಿ ನಡೆಯಲಿದೆ. 

ಈ ನಾಟಕೋತ್ಸವವು ‘ಮತ್ತೆ ಕಥನಗಳು’ ಎಂಬ ವಿಷಯದ ಮೇಲೆ ಕೇಂದ್ರೀಕೃತವಾಗಿದೆ. ಪ್ರತಿ ದಿನ ಸಂಜೆ 7.30ಕ್ಕೆ ನಾಟಕಗಳು ಪ್ರದರ್ಶನ ಕಾಣಲಿವೆ. ರಂಗ ಶಂಕರದಲ್ಲಿ ಆರೂ ದಿನಗಳು ನಾಟಕಗಳ ಪ್ರದರ್ಶನ ಇರಲಿದೆ. ಜಾಗೃತಿ ಥಿಯೇಟರ್‌ನಲ್ಲಿ ಇದೇ 29ರಿಂದ ನ.1ರವರೆಗೆ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ರಂಗ ಶಂಕರ ತಂಡದಿಂದ ‘ಸ್ಲೈಸಸ್‌ ಆಫ್‌ ದ ಮೂನ್ ಸ್ವೆಪ್ಟ್‌ ಬೈ ದ ವಿಂಡ್’ ಇಂಗ್ಲಿಷ್ ನಾಟಕ, ಮುಂಬೈನ ಅರಣ್ಯ ಥಿಯೇಟರ್ ಗ್ರೂಪ್‌ನಿಂದ ‘ಜೋ ಡೂಬಾ ಸೋ ಫಾರ್’ ಹಿಂದಿ, ಪರ್ಷಿಯನ್ ಹಾಗೂ ಉರ್ದು ನಾಟಕ, ಪಾಂಡಿಚೇರಿಯ ಆದಿಶಕ್ತಿ ತಂಡದಿಂದ ‘ಊರ್ಮಿಳಾ’ ಇಂಗ್ಲಿಷ್ ನಾಟಕ, ಚೆನ್ನೈನ ತಿನೈನಿಲ್ ವಾಸಿಗಳ್ ತಂಡದಿಂದ ‘ಪಾಟಿಗುಳುಮ್’ ತಮಿಳು ನಾಟಕ, ಪುಣೆಯ ಆಸಕ್ತ ಕಲಾಮಂಚ್‌ನಿಂದ ‘ಘಂಟಾ ಘಂಟಾ ಘಂಟಾ ಘಂಟಾ ಘಂಟಾ’ ಮರಾಠಿ ನಾಟಕ ಹಾಗೂ ಬೆಂಗಳೂರಿನ ದೃಶ್ಯ ರಂಗತಂಡದಿಂದ ‘ಮಹಿಳಾ ಭಾರತ’ ಕನ್ನಡ ನಾಟಕ ಪ್ರದರ್ಶನ ಕಾಣಲಿದೆ ಎಂದು ಆಯೋಜಕರು ಹೇಳಿದ್ದಾರೆ.

ಪ್ರವೇಶ ದರ ₹ 300 ನಿಗದಿಪಡಿಸಲಾಗಿದ್ದು, ಬುಕ್‌ ಮೈ ಶೋದಲ್ಲಿ ಟಿಕೆಟ್‌ಗಳು ಲಭ್ಯವಿವೆ ಎಂದು ಪ್ರಕಟಣೆ ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT