ಮಂಗಳವಾರ, ಜನವರಿ 28, 2020
19 °C

ಯುವತಿ ಮೇಲೆ ಅತ್ಯಾಚಾರ; ಎಂಜಿನಿಯರ್ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಯುವತಿಗೆ ಮದ್ಯ ಕುಡಿಸಿ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಆರೋಪದಡಿ ವಿನೋದ್ ಎಂಬಾತನನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

‘ನಗರದ ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿರುವ ವಿನೋದ್‌, ಸ್ಥಳೀಯ ಪೇಯಿಂಗ್‌ ಗೆಸ್ಟ್‌ ಕಟ್ಟಡವೊಂದರಲ್ಲಿ ವಾಸವಿದ್ದ 24 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ್ದ. ಯುವತಿ ನೀಡಿದ್ದ ದೂರಿನಡಿ ಆತನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

’ಹೊಸ ವರ್ಷದ ಶುಭಾಶಯ ಕೋರುವ ನೆಪದಲ್ಲಿ ಇದೇ 3ರಂದು ಯುವತಿಯನ್ನು ಕೋರಮಂಗಲಕ್ಕೆ ಕರೆಸಿಕೊಂಡಿದ್ದ. ಯುವತಿಯನ್ನು ಪಬ್‌ಗೆ ಕರೆದೊಯ್ದು ಮದ್ಯ ಕುಡಿಸಿದ್ದ. ಮದ್ಯದ ನಶೆಯಲ್ಲಿದ್ದ ಯುವತಿಯನ್ನು ಹೋಟೆಲೊಂದರ ಕೊಠಡಿಗೆ ಕರೆದೊಯ್ದಿದ್ದ.’

‘ಯುವತಿ ಅಂಗಾಂಗಗಳನ್ನು ಮುಟ್ಟಿ ಅನುಚಿತವಾಗಿ ವರ್ತಿಸಿ ಅತ್ಯಾಚಾರ ಎಸಗಿದ್ದ. ಮದುವೆಯಾಗುವಂತೆ ಜೀವ ಬೆದರಿಕೆ ಹಾಕಿ ಪೀಡಿಸಿದ್ದ. ಈ ಸಂಬಂಧ ಯುವತಿ ದೂರಿನಲ್ಲಿ ಹೇಳಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.  

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು