ಬೆಂಗಳೂರು: ಯುವತಿಯೊಬ್ಬರ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿರುವ ಸಹೋದರರಿಬ್ಬರು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದೂರು ದಾಖಲಾಗಿದೆ.

‘ನಗರದ ಬ್ರಿಗೇಡ್ ರಸ್ತೆಯಲ್ಲಿರುವ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿರುವ 19 ವರ್ಷದ ಯುವತಿ, ಅತ್ಯಾಚಾರ ಹಾಗೂ ಮತಾಂತರಕ್ಕೆ ಒತ್ತಡ ಹೇರುತ್ತಿರುವ ಬಗ್ಗೆ ದೂರು ನೀಡಿದ್ದಾರೆ. ಅದರನ್ವಯ ಶಬೀರ್ ಅಹಮ್ಮದ್ (28) ಎಂಬಾತನನ್ನು ಬಂಧಿಸಲಾಗಿದೆ. ಆತನ ಸಹೋದರ ಮೊಹಮ್ಮದ್ ರಿಲ್ವಾನ್ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೆಲಸದ ಸ್ಥಳದಲ್ಲಿ ಪರಿಚಯವಾಗಿದ್ದ ಆರೋಪಿ ಶಬೀರ್ ಅಹಮ್ಮದ್ ಹಾಗೂ ಮೊಹಮ್ಮದ್ ರಿಲ್ವಾನ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇಸ್ಲಾಂ ಧರ್ಮಕ್ಕೆ ಮತಾಂತರವಾದರೆ ಮಾತ್ರ ಮದುವೆಯಾಗುವುದಾಗಿ ರಿಲ್ವಾನ್ ಒತ್ತಡ ಹೇರುತ್ತಿದ್ದಾರೆ’ ಎಂದು ಯುವತಿ ಆರೋಪಿಸಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ಸ್ಪಾದಲ್ಲಿ ಪರಿಚಯ: ’ನಗರದ ಸ್ಪಾವೊಂದರಲ್ಲಿ ಯುವತಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಅವರಿಗೆ ಆರೋಪಿ ಶಬೀರ್ ಪರಿಚಯವಾಗಿತ್ತು. ನಂತರ ಆರೋಪಿಯೇ ಯುವತಿಗೆ ಬ್ರಿಗೇಡ್ ರಸ್ತೆಯಲ್ಲಿರುವ ಹೋಟೆಲ್‌ವೊಂದರಲ್ಲಿ ಸ್ವಾಗತಕಾರಿಣಿ ಆಗಿ ಕೆಲಸ ಕೊಡಿಸಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೆಲಸದ ವಿಚಾರವಾಗಿ ಮಾತನಾಡಬೇಕೆಂದು ಯುವತಿಯನ್ನು ಬ್ರಿಗೇಡ್ ರಸ್ತೆಯಲ್ಲಿರುವ ‘ಓಯೊ ಟೌನ್‌ಹೌಸ್’ ಕೊಠಡಿಗೆ ಕರೆದೊಯ್ದಿದ್ದ ಆರೋಪಿ, ಅತ್ಯಾಚಾರ ಎಸಗಿದ್ದ. ವಿಚಾರವನ್ನು ಯಾರಿಗಾದರೂ ಹೇಳಿದರೆ ಮುಖಕ್ಕೆ ಆ್ಯಸಿಡ್ ಹಾಕುವುದಾಗಿ ಹಾಗೂ ಪೋಷಕರನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದ. ಅದಾದ ನಂತರ ಯುವತಿಯನ್ನು ಬೆದರಿಸಿ ನಾಲ್ಕು ಬಾರಿ ಶಬೀರ್ ಅತ್ಯಾಚಾರ ಎಸಗಿದ್ದ. ಈ ಸಂಗತಿ ದೂರಿನಲ್ಲಿದೆ’ ಎಂದೂ ಮೂಲಗಳು ತಿಳಿಸಿವೆ.

‘ಯುವತಿ ಕೆಲಸ ಮಾಡುತ್ತಿದ್ದ ಹೋಟೆಲ್‌ನಲ್ಲೇ ಶಬೀರ್ ಸಹೋದರ ಮೊಹಮ್ಮದ್ ರಿಲ್ವಾನ್ ಸಹ ಕೆಲಸ ಮಾಡುತ್ತಿದ್ದ. ‘ನನ್ನ ಅಣ್ಣ ಶಬೀರ್, ನಿನಗೆ ಅನ್ಯಾಯ ಮಾಡಿದ್ದಾನೆ. ಆತ ನಿನ್ನ ತಂಟೆಗೆ ಬರದಂತೆ ನಾನು ನೋಡಿಕೊಳ್ಳುತ್ತೇನೆ’ ಎಂದು ಮೊಹಮ್ಮದ್ ಹೇಳಿದ್ದ. ನಂತರ, ತಾನೇ ಯುವತಿ ಸ್ನೇಹ ಸಂಪಾದಿಸಿ ಸಲುಗೆ ಬೆಳೆಸಿದ್ದ. ಪ್ರೇಮ ನಿವೇದನೆ ಮಾಡಿದ್ದ ಮೊಹಮ್ಮದ್ ರಿಲ್ವಾನ್, ಮದುವೆಯಾಗುವುದಾಗಿ ಹೇಳಿ ಯುವತಿಯ ಪೋಷಕರ ಜೊತೆ ಮಾತುಕತೆ ನಡೆಸಿದ್ದ. ಅದರ ನಡುವೆಯೇ ಯುವತಿ ಮೇಲೆ ಹಲವು ಬಾರಿ ಅತ್ಯಾಚಾರವನ್ನೂ ಎಸಗಿದ್ದ’ ಎಂದೂ ಮೂಲಗಳು ಹೇಳಿವೆ.

ಬೇರೊಂದು ಮದುವೆಯಾಗಿರುವ ಆರೋಪಿ; ‘ದೂರುದಾರ ಯುವತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ಆರೋಪಿ ಮೊಹಮ್ಮದ್ ರಿಲ್ವಾನ್, ಬೇರೊಂದು ಯುವತಿಯನ್ನು ಈಗಾಗಲೇ ಮದುವೆಯಾಗಿದ್ದಾನೆ. ಈ ಸಂಗತಿಯನ್ನು ಬಂಧಿತ ಸಹೋದರ ಶಬೀರ್ ಬಾಯ್ಬಿಟ್ಟಿದ್ದಾನೆ. ಮದುವೆ ವಿಷಯ ಮುಚ್ಚಿಟ್ಟು ಆರೋಪಿಯು ಯುವತಿ ಜೊತೆ ಮದುವೆಯಾಗಲು ಮುಂದಾಗಿದ್ದ’ ಎಂದೂ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.