ಸೋಮವಾರ, ಜನವರಿ 20, 2020
20 °C

ಯುವತಿಗೆ ಮದ್ಯ ಕುಡಿಸಿ ಅತ್ಯಾಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಯುವತಿಗೆ ಮದ್ಯ ಕುಡಿಸಿ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿರುವ ಸಂಬಂಧ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಸ್ಥಳೀಯ ಪೇಯಿಂಗ್‌ ಗೆಸ್ಟ್‌ ಕಟ್ಟಡವೊಂದರಲ್ಲಿ ನೆಲೆಸಿರುವ 24 ವರ್ಷದ ಯುವತಿ ದೂರು ನೀಡಿದ್ದಾರೆ. ಯುವಕ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಯುವತಿ ಹಾಗೂ ಆರೋಪಿ ಎರಡು ತಿಂಗಳ ಹಿಂದೆ ಪ್ರತ್ಯೇಕವಾಗಿ ಪುದುಚೇರಿ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿಯೇ ಅವರಿಬ್ಬರಿಗೆ ಪರಿಚಯವಾಗಿತ್ತು. ನಗರಕ್ಕೆ ವಾಪಸು ಬಂದ ಮೇಲೆ ಅವರಿಬ್ಬರು ಹಲವು ಬಾರಿ ಭೇಟಿ ಆಗಿದ್ದರು.’

‘ಇದೇ 3ರಂದು ಯುವತಿಗೆ ಕರೆ ಮಾಡಿದ್ದ ಆರೋಪಿ, ಭೇಟಿಯಾಗುವಂತೆ ಹೇಳಿ ಕರೆಸಿಕೊಂಡಿದ್ದ. ನಂತರ, ಯುವತಿಯನ್ನು ಪಬ್‌ಗೆ ಕರೆದೊಯ್ದು ಮದ್ಯ ಕುಡಿಸಿದ್ದ. ತಾನೂ ಕುಡಿದಿದ್ದ. ಮದ್ಯದ ನಶೆಯಲ್ಲಿದ್ದ ಯುವತಿಯನ್ನು ಹೋಟೆಲೊಂದರ ಕೊಠಡಿಗೆ ಕರೆದೊಯ್ದಿದ್ದ’ ಎಂದು ಮೂಲಗಳು ಹೇಳಿವೆ.

‘ಯುವತಿ ಅಂಗಾಂಗಗಳನ್ನು ಮುಟ್ಟಿ ಅನುಚಿತವಾಗಿ ವರ್ತಿಸಿದ್ದ ಆರೋಪಿ, ಅವರ ಮೇಲೆ ಅತ್ಯಾಚಾರ ಎಸಗಿದ್ದ.  ಮದುವೆಯಾಗುವಂತೆ ಪೀಡಿಸಿದ್ದ. ಯುವತಿ ನಶೆಯಲ್ಲಿದ್ದರಿಂದ ಆತನಿಂದ ತಪ್ಪಿಸಿಕೊಳ್ಳಲು ಆಗಿರಲಿಲ್ಲ. ಮರುದಿನ ಕೊಠಡಿಯಿಂದ ಪೇಯಿಂಗ್‌ ಗೆಸ್ಟ್‌ ಕಟ್ಟಡಕ್ಕೆ ಹೋಗಿದ್ದ ಯುವತಿ, ಸ್ನೇಹಿತರು ಹಾಗೂ ಸಂಬಂಧಿಕರಿಗೆ ವಿಷಯ ತಿಳಿಸಿದ್ದರು. ನಂತರ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು