ಬೆಂಗಳೂರು: ಸರಕುಗಳ ಮರು ಸಂಗ್ರಹ ಮತ್ತು ಮಾರಾಟ ಕ್ಷೇತ್ರದ ಕುರಿತ ವಿಸ್ತೃತ ಚರ್ಚೆ ನಗರದ ಮಾನ್ಫೋ ಕನ್ವೆನ್ಷನ್ ಹಾಲ್ನಲ್ಲಿ ಗುರುವಾರ ಆರಂಭಗೊಂಡ ‘ರಿ ಕಾಮರ್ಸ್ ಎಕ್ಸ್ಪೋ- 2019’ದಲ್ಲಿ ನಡೆಯಿತು.

ಎಲೆಕ್ಟ್ರಾನಿಕ್ ವಸ್ತುಗಳ ಮರುಬಳಕೆ, ಎಲೆಕ್ಟ್ರಾನಿಕ್ ತ್ಯಾಜ್ಯ ನಿರ್ವಹಣೆ ಅವುಗಳ ಮರುಬಳಕೆ ಮತ್ತು ಈ ಕ್ಷೇತ್ರದ ಭವಿಷ್ಯದ ಬಗ್ಗೆ ಪರಿಣತರು ತಮ್ಮ ವಿಶ್ಲೇಷಣೆಗಳನ್ನು ಮಂಡಿಸಿದರು.

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವಾಲಯ, ರಾಷ್ಟ್ರೀಯ ಕೌಶಲ ಅಭಿವೃದ್ಧಿ ಇಲಾಖೆ, ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ಸಚಿವಾಲಯದ ಆಶ್ರಯದಲ್ಲಿ ಈ ಕಾರ್ಯಕ್ರಮ ಆರಂಭವಾಗಿದ್ದು, ಫೆ. 3ರವರೆಗೆ ನಡೆಯಲಿದೆ.

ಮರುಬಳಕೆ ವಸ್ತುಗಳ ಪ್ರದರ್ಶನ ಮತ್ತು ಮಾರಾಟ, ವ್ಯವಹಾರ ವೇದಿಕೆ, ಹೂಡಿಕೆ ಮಾಹಿತಿ, ಬ್ಯಾಂಕ್ ನೆರವು ಸಂಬಂಧಿತ ಮಾಹಿತಿ ಈ ಪ್ರದರ್ಶನದಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.