ಬೆಂಗಳೂರು: ಸಂಗೀತಗಾರರೊಬ್ಬರು ಐದು ಕಾದಂಬರಿಗಳನ್ನು ಬರೆಯುವ ಮೂಲಕ ಕನ್ನಡ ಸಾಹಿತ್ಯದಲ್ಲಿ ದಾಖಲೆ ಬರೆದಿದ್ದಾರೆ ಎಂದು ಅಂಕಣಕಾರ ಎನ್.ಎಸ್.ಶ್ರೀಧರಮೂರ್ತಿ ಹೇಳಿದರು.

ನಗರದ ನರಸಿಂಹರಾಜ ಕಾಲೋನಿಯ ಪತ್ತಿ ಸಭಾಂಗಣದಲ್ಲಿ ಮದ್ವಾದಿರಾಜ ಆರಾಧನಾ ಟ್ರಸ್ಟ್ (ಶಾರದಾ ಕಲಾಕೇಂದ್ರ) ಹಾಗೂ ಸಮನ್ವಯ ಸಮಿತಿ ಕನ್ನಡವೇ ಸತ್ಯ ಪ್ರತಿಷ್ಠಾನ ಆಯೋಜಿಸಿದ್ದ ಸಮಾರಂಭದಲ್ಲಿ ವಿದ್ವಾನ್ ಆರ್. ಕೆ. ಪದ್ಮನಾಭ ಅವರ ಐದು ಕಾದಂಬರಿಗಳ ಪುನರ್ ಮುದ್ರಣದ ಕೃತಿಗಳ ಜನಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಅನಂತನಾದ, ನಾದ ಬಿಂದು, ವಿಪ್ರ ವಿಕ್ರಮ, ಸುವರ್ಣಗಾನ, ಬೇವು ಬೆಲ್ಲ ಕಾದಂಬರಿಯನ್ನು ಆರ್.ಕೆ.ಪದ್ಮನಾಭ ಅವರು ರಚಿಸಿ ಭಿನ್ನ ಶಿಸ್ತುಗಳ ಅಂತರ ಅಧ್ಯಯನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.

ಶಾಂತಾ ನಾಗಮಂಗಲ, ಗಿರಿಜಾ ರಾಜ್, ಬಿ. ಎಸ್. ಚಂದ್ರಶೇಖರ್, ರಂಜನೀ ಕೀರ್ತಿ, ಜಿ. ಎನ್. ನರಸಿಂಹಮೂರ್ತಿ ಅವರು ಕಾದಂಬರಿಗಳ ಕುರಿತು ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಬೆಂ. ಶ್ರೀ.ರವೀಂದ್ರ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.