ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆಗೂ ಮುನ್ನ ನಟ ದರ್ಶನ್ ಮತ್ತು ಸ್ನೇಹಿತರು ಸ್ಟೋನಿ ಬ್ರೂಕ್ ಪಬ್‌ನಲ್ಲಿ ಪಾರ್ಟಿ ನಡೆಸಿದ್ದರು. ಆರೋಪಿಗಳು ಜತೆಗೂಡಿದ್ದ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಸಹ ಭಾಗಿಯಾಗಿರುವುದು ತನಿಖೆ ವೇಳೆ ಸಾಬೀತಾಗಿದೆ.

ಜೂನ್ 8ರಂದು ಆರ್.ಆರ್. ನಗರದ ಸ್ಟೋನಿ ಬ್ರೂಕ್ ಪಬ್‌ನಲ್ಲಿ ದರ್ಶನ್, ಅವರ ವ್ಯವಸ್ಥಾಪಕ ನಾಗರಾಜ್, ಪ್ರದೂಷ್, ವಿನಯ್ ಪಾರ್ಟಿ ಮಾಡಿದ್ದರು. ಪಬ್ ಮಾಲೀಕ ವಿನಯ್, ದರ್ಶನ್ ಮೇಲಿನ ಅಭಿಮಾನದಿಂದ ‘ಡಿ ಬಾಸ್ ಸಫಾರಿ’ ಎಂಬ ಪ್ರತ್ಯೇಕ ಲಾಂಜ್ ನಿರ್ಮಿಸಿದ್ದರು. ವನ್ಯಜೀವಿಗಳ ಚಿತ್ರ, ಹಸಿರಿನ ವಾತಾವರಣ ಇದೆ. ದರ್ಶನ್ ಹಾಗೂ ಅವರ ಸ್ನೇಹಿತರು ಈ ಪಬ್‌ಗೆ ಬಂದಾಗ ಇದೇ ಲಾಂಜ್‌ನಲ್ಲಿ ಪಾರ್ಟಿ ಮಾಡುತ್ತಿದ್ದರು. ವಿಶೇಷವಾಗಿ ವಿನ್ಯಾಸ ಮಾಡಿದ ಕುರ್ಚಿಯಲ್ಲಿಯೇ ದರ್ಶನ್ ಕುಳಿತುಕೊಳ್ಳುತ್ತಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಸ್ಟೋನಿ ಬ್ರೂಕ್ ಪಬ್‌ನಲ್ಲಿ ದರ್ಶನ್ ಮತ್ತು ನಡೆಸಿದ ಪಾರ್ಟಿಯ ದೃಶ್ಯಗಳನ್ನು ತನಿಖೆ ವೇಳೆ ಮರುಸೃಷ್ಟಿ ಮಾಡಲಾಗಿತ್ತು. ದರ್ಶನ್ ಹಾಗೂ ಸಹಚರರನ್ನು ಕರೆತಂದು ಸ್ಥಳ ಮಹಜರು ಮಾಡಲಾಗಿತ್ತು.

ದರ್ಶನ್, ನಾಗರಾಜ್, ಪ್ರದೂಷ್, ವಿನಯ್, ಚಿಕ್ಕಣ್ಣ ಕೊಲೆ ನಡೆದ ದಿನ ‘ಡಿ ಬಾಸ್ ಸಫಾರಿ’ ಲಾಂಜ್‌ನಲ್ಲಿ ಯಾವ್ಯಾವ ಸ್ಥಳಗಳಲ್ಲಿ ಹೇಗೆ? ಕುಳಿತಿದ್ದರೋ ಅದೇ ರೀತಿಯ ಚಿತ್ರಣವನ್ನು ಮಹಜರು ವೇಳೆ ಮರುಸೃಷ್ಟಿಸಿ, ಚಿತ್ರೀಕರಿಸಲಾಗಿದೆ. ನೀಲಿ ಬಣ್ಣದ ಟಿ ಶರ್ಟ್ ಧರಿಸಿರುವ ದರ್ಶನ್ ಎಡ ಬದಿಯಲ್ಲಿ ಪ್ರದೂಷ್ ಹಾಗೂ ಬಲ ಬದಿಯಲ್ಲಿ ಚಿಕ್ಕಣ್ಣ ಕುಳಿತಿದ್ದರು ಎಂಬುದು ಫೋಟೊದಲ್ಲಿ ಬಹಿರಂಗಗೊಂಡಿದೆ.

ಪಾರ್ಟಿ ಮಾಡಿದ್ದ ಸ್ಥಳದಲ್ಲಿಯೇ ಆರೋಪಿಗಳನ್ನು ಕೂರಿಸಿ ಪೊಲೀಸ್ ಅಧಿಕಾರಿಯೊಬ್ಬರು ಲ್ಯಾಪ್ಟಾಪ್ನಲ್ಲಿ ಎಲ್ಲ ಮಾಹಿತಿಯನ್ನು ದಾಖಲಿಸಿಕೊಂಡಿದ್ದರು. ದರ್ಶನ್ ಮತ್ತು ಸ್ನೇಹಿತರು ಮೌನವಾಗಿ ಕುಳಿತಿರುವುದು, ಚಿಕ್ಕಣ್ಣ ಹಾಗೂ ವಿನಯ್ ಆತಂಕದಲ್ಲಿರುವುದು ಸ್ಥಳ ಮಹಜರಿನ ಫೋಟೊದಲ್ಲಿ ಕಾಣಿಸುತ್ತದೆ. ಇತರೆ ಕೆಲವು ಪೊಲೀಸ್ ಸಿಬ್ಬಂದಿ ಸಹ ಚಿತ್ರದಲ್ಲಿದ್ದಾರೆ.

ನಟ ಚಿಕ್ಕಣ್ಣ ಸಹ ಕೊಲೆ ನಡೆದ ದಿನ ಪಾರ್ಟಿಯಲ್ಲಿದ್ದ ಕಾರಣ ಅವರನ್ನೂ ಮಹಜರಿಗೆ ಕರೆಸಲಾಗಿತ್ತು. ಆದರೆ, ಪ್ರಕರಣದಲ್ಲಿ ಚಿಕ್ಕಣ್ಣ ಹೇಳಿಕೆಯನ್ನಷ್ಟೆ ದಾಖಲಿಸಿದ್ದು, ಸಾಕ್ಷಿದಾರರನ್ನಾಗಿ ಮಾಡಲಾಗಿದೆ.

ಪಬ್‌ನಲ್ಲಿ ಪಾರ್ಟಿ ನಡೆಸುತ್ತಿದ್ದ ವೇಳೆ ಪವನ್ ಕರೆ ಮಾಡಿ ರೇಣುಕಸ್ವಾಮಿಯನ್ನು ಪಟ್ಟಣಗೆರೆ ಶೆಡ್‌ಗೆ ಕರೆ ತಂದಿರುವುದಾಗಿ ಮಾಹಿತಿ ನೀಡಿದ್ದರು. ಪಾರ್ಟಿಯಿಂದ ಹೊರಟಿದ್ದ ದರ್ಶನ್, ರಾಜರಾಜೇಶ್ವರಿ ನಗರಕ್ಕೆ ತೆರಳಿ, ಅಲ್ಲಿಂದ ಪವಿತ್ರಾ ಜತೆಗೆ ಶೆಡ್‌ಗೆ ಬಂದಿದ್ದರು.

ಪಾರ್ಟಿಯಿಂದ ಎದ್ದು ದರ್ಶನ್ ಮತ್ತು ವಿನಯ್ ಕೆಂಪು ಬಣ್ಣದ ಜೀಪಿನಲ್ಲಿ ಕೃತ್ಯ ನಡೆದ ಸ್ಥಳಕ್ಕೆ ಬಂದರು. ಬಳಿಕ ಕಪ್ಪು ಬಣ್ಣದ ಸ್ಕಾರ್ಪಿಯೊ ವಾಹನದಲ್ಲಿ ಅಲ್ಲಿಂದ ತೆರಳಿದ್ದರು. ಮೃತದೇಹವನ್ನು ಬಿಳಿ ಬಣ್ಣದ ವಾಹನದಲ್ಲಿ ಸಾಗಿಸಿರುವ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಎಲ್ಲಾ ಅಂಶಗಳನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.