ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋರ್ಟಿಸ್‌ನಲ್ಲಿ ಬದಲಿ ಹೃದಯ ಅಳವಡಿಕೆ

Last Updated 7 ಆಗಸ್ಟ್ 2018, 19:58 IST
ಅಕ್ಷರ ಗಾತ್ರ

ಬೆಂಗಳೂರು: ನಗರದ 13 ವರ್ಷದ ಹೃದ್ರೋಗಿಗೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್‌ ಆಸ್ಪತ್ರೆಯಲ್ಲಿಸೋಮವಾರ ರಾತ್ರಿ ಬದಲಿ ಹೃದಯವನ್ನು ಅಳವಡಿಸಲಾಯಿತು.

ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆವಿಶೇಷ ವಿಮಾನದಲ್ಲಿ ಹೃದಯವನ್ನು ತರಲಾಯಿತು. ಅಲ್ಲಿಂದ ಬನ್ನೇರುಘಟ್ಟ ರಸ್ತೆಯಲ್ಲಿರುವ ಆಸ್ಪತ್ರೆಗೆ 45 ಕಿ.ಮೀ ದೂರವಿದೆ. ಹೃದಯವನ್ನು ಸಕಾಲದಲ್ಲಿ ತಲುಪಿಸುವ ಉದ್ದೇಶಕ್ಕಾಗಿ ನಗರದ ಸಂಚಾರಿ ಪೊಲೀಸರು ಉದ್ದಕ್ಕೂ ಸಂಚಾರ ಮುಕ್ತ ವ್ಯವಸ್ಥೆ ಮಾಡಿದ್ದರು.

ಇದರಿಂದಾಗಿ ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ಕೇವಲ 45 ನಿಮಿಷಗಳಲ್ಲಿ ಹೃದಯ ತಲುಪಿಸಲಾಯಿತು ಎಂದು ಫೋರ್ಟಿಸ್‌ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

13 ವರ್ಷ ವಯಸ್ಸಿನ ರೋಗಿಗೆ ವಿಶಾಖಪಟ್ಟಣದಲ್ಲಿ ಮಿದುಳು ನಿಷ್ಕ್ರಿಯಗೊಂಡಿದ್ದ 20 ವರ್ಷ ವಯಸ್ಸಿನ ಯುವಕನ ಹೃದಯವನ್ನು ಕುಟುಂಬದ ಒಪ್ಪಿಗೆ ಮೇರೆಗೆ ಪಡೆಯಲಾಯಿತು ಎಂದುಆಸ್ಪತ್ರೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT