ಭಾನುವಾರ, ಜುಲೈ 25, 2021
21 °C

ರೇರಾ: ಆನ್‌ಲೈನ್‌ನಲ್ಲೇ ವ್ಯವಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯೋಜನೆಗಳ ನೋಂದಣಿ, ಏಜೆಂಟರ್‌ ನೋಂದಣಿ ಸೇರಿದಂತೆ ಎಲ್ಲಾ ವ್ಯವಹಾರಗಳನ್ನು ಆನ್‌ಲೈನ್ ಮೂಲಕವೇ ನಿರ್ವಹಿಸಲು ಕರ್ನಾಟಕ ರಿಯಲ್ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ (ರೇರಾ) ಮುಂದಾಗಿದೆ.

‘ವಿಡಿಯೊ ಸಂವಾದದ ಮೂಲಕ ಪ್ರಕರಣಗಳ ವಿಚಾರಣೆ ನಡೆಸಲಿದೆ. ಪ್ರತಿವಾದಿಗಳ ಉತ್ತರ, ಪ್ರತ್ಯುತ್ತರಗಳನ್ನು ಪಡೆಯಲಿದೆ.  ಕೊರೊನಾ ಸೊಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಂದರ್ಶಕರು ಕಚೇರಿಗೆ ಭೇಟಿ ನೀಡಬೇಕಿದ್ದರೆ ಪೂರ್ವಾನುಮತಿ ಪಡೆಯಬೇಕು’ ಎಂದು ರೇರಾ ಪ್ರಕಟಣೆ ತಿಳಿಸಿದೆ.

ವಕೀಲರ ನೇಮಕಕ್ಕೆ ಅರ್ಜಿ ಆಹ್ವಾನ: ಪ್ರಾಧಿಕಾರದ ಪರವಾಗಿ ಹೈಕೋರ್ಟ್‌ ಸೇರಿ ಇತರೆ ನ್ಯಾಯಾಲಯಗಳಲ್ಲಿ ವಾದ ಮಾಡಲು ವಕೀಲರ ತಂಡವನ್ನು ನೇಮಿಸಿಕೊಳ್ಳಲು ರೇರಾ ಅರ್ಜಿ ಅಹ್ವಾನಿಸಿದೆ.

‘ಕಂದಾಯ, ರಿಯಲ್ ಎಸ್ಟೇಟ್‌, ಬಿಡಿಎ, ಬಿಬಿಎಂಪಿಯ ದಾವೆಗಳ ನಿರ್ವಹಣೆಯಲ್ಲಿ 12 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿದವರು ಜು.31ರೊಳಗೆ ಅರ್ಜಿ ಸಲ್ಲಿಸಬಹುದು’ ಎಂದು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.