ಬುಧವಾರ, ಜುಲೈ 6, 2022
21 °C

‘ಸಂಶೋಧನೆ ಸಮಾಜದ ಒಳಿತಿಗಾಗಿರಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಹಂಕ: ‘ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಯಾವುದೇ ಸಂಶೋಧನೆ ನಡೆಸಿ, ಹೊಸದನ್ನು ಕಂಡು ಹಿಡಿದರೂ ಅದರಿಂದ ಸಮಾಜಕ್ಕೆ ಎಷ್ಟು ಲಾಭ ಹಾಗೂ ಒಳಿತಾಗುತ್ತಿದೆ ಎಂಬುದನ್ನು ಗುರುತಿಸುವಂತಿರಬೇಕು’ ಎಂದು ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಪಿ.ಶ್ಯಾಮರಾಜು ಹೇಳಿದರು.

ರೇವಾ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ (ಇಇಇ) ಸ್ಕೂಲ್ ವಿದ್ಯಾರ್ಥಿಗಳ ಸಾಧನೆ ಆವಿಷ್ಕಾರಗಳನ್ನು ಪ್ರಸ್ತುತ ಪಡಿಸುವ ‘ರೇವಾ ಇಂಪ್ರಿಂಟ್’ ಕಾರ್ಯಕ್ರಮದಲ್ಲಿ, ‘ಇಇಇ ವಿಭಾಗದ ವಿದ್ಯಾರ್ಥಿಗಳು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಏನೆಲ್ಲ ವಿಶೇಷ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ’ ಎಂದರು.

‘ರೈತಾಪಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ‘ಸಿಂಗಲ್ ಫೇಸ್ ಪ್ರಿವೆಂಟರ್’ ಸಾಧನವನ್ನು ಅಭಿವೃದ್ಧಿ ಪಡಿಸಿ ಲೋಕಾರ್ಪಣೆ ಮಾಡಿರುವುದು ತೃಪ್ತಿ ತಂದಿದೆ. ವಿದ್ಯುತ್ ಸಮಸ್ಯೆಯಿಂದ ಮೋಟಾರ್‌ಗಳು ಕೆಟ್ಟು ಹೋಗುವ ಹಾಗೂ ಅದರಿಂದಾಗುವ ನಷ್ಟವನ್ನು ತಪ್ಪಿಸಲು ಈ ಸಾಧನ ನೆರವಾಗಲಿದೆ. ಹಳ್ಳಿಗಾಡಿನ ರೈತರನ್ನು ಗಮನದಲ್ಲಿಟ್ಟುಕೊಂಡು ಅನ್ವೇಷಣೆ ಮಾಡುತ್ತಿರುವುದು ನಮ್ಮ ವಿದ್ಯಾರ್ಥಿಗಳಿಗಿರುವ ಸಾಮಾಜಿಕ ಕಾಳಜಿಯನ್ನು ತೋರಿಸುತ್ತಿದೆ’ ಎಂದು ತಿಳಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರೇವಾ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಧನಂಜಯ, ಕುಲಸಚಿವ ಡಾ.ಎನ್.ರಮೇಶ್, ಇಇಇ ವಿಭಾಗದ ನಿರ್ದೇಶಕ ಡಾ.ರಾಜಶೇಖರ ಮಂಡಿ ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು