ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇವಾ ವಿಶ್ವವಿದ್ಯಾಲಯದಲ್ಲಿ ಬೋಧನೆ ಆರಂಭ

Last Updated 19 ನವೆಂಬರ್ 2020, 20:44 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ರೇವಾ ವಿಶ್ವವಿದ್ಯಾಲಯ ತನ್ನ ಕ್ಯಾಂಪಸ್ ಅನ್ನು ತೆರೆಯುವ ಮೂಲಕ ಎಲ್ಲ ವಿದ್ಯಾರ್ಥಿ
ಗಳಿಗೆ ಶೈಕ್ಷಣಿಕ ಬೋಧನೆಗೆ ಸಜ್ಜಾಗಿದೆ.

ರೇವಾ ವಿಶ್ವವಿದ್ಯಾಲಯ ಇದೀಗ ನವೀನ ತಂತ್ರಜ್ಞಾನ ಹಾಗೂ ಒಂದಿಷ್ಟು ಬದಲಾವಣೆಗಳ ಮೂಲಕ ವಿದ್ಯಾರ್ಥಿಗಳನ್ನು ಆಹ್ವಾನಿಸಲು ಸಜ್ಜಾಗಿದ್ದು, ಹೊಸ ರೂಪದೊಂದಿಗೆ ಇನ್ನಷ್ಟು ಉತ್ತಮ ಶಿಕ್ಷಣ ನೀಡಲು ಸಿದ್ಧಗೊಂಡಿದೆ ಎಂದು ವಿವಿಯ ಪ್ರಕಟಣೆ ತಿಳಿಸಿದೆ.

ವಿದ್ಯಾರ್ಥಿಗಳಿಗೆ ಎಸ್‍ಎಂಎಸ್‌ಗಳ ಮೂಲಕ ಮಾಹಿತಿ ನೀಡಲಾಗಿದೆ. ಕುಲಪತಿಗಳು ಖುದ್ದಾಗಿ ವಿದ್ಯಾರ್ಥಿಗಳಿಗೆ ಕರೆ ಮಾಡಿದ್ದು, ಕ್ಯಾಂಪಸ್‍ಗೆ ಆಹ್ವಾನಿಸಿದ್ದಾರೆ. ವಿದ್ಯಾರ್ಥಿಗಳನ್ನು ಕ್ಯಾಂಪಸ್‍ಗೆ ಆಹ್ವಾನಿಸಲು ಮಾರ್ಗದರ್ಶಕ
ರನ್ನು ನೇಮಿಸಿದ್ದು, ಮಾರ್ಗದರ್ಶಕರು ಕೋವಿಡ್ ಸುರಕ್ಷತಾ ಕ್ರಮಗಳು ಹಾಗೂ ಆರೋಗ್ಯಪೂರ್ಣ ವಾತಾವರಣ ಕುರಿತು ವಿದ್ಯಾರ್ಥಿಗಳಿಗೆ ಮನೋಸ್ಥೈರ್ಯ ತುಂಬುವ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದೆ.

ಶುದ್ದ ಆಹಾರ ನೀಡಲು ಹೊಸ ಫುಡ್ ಕೋರ್ಟ್, ಆರೋಗ್ಯ ಕಾಳಜಿಗೆ ರೇವಾ ಹೆಲ್ತ್ ಕೇರ್ ಸೆಂಟರ್ ಆರಂಭಿಸಲಾಗಿದೆ. ರೇವಾ ಸ್ಟೋರ್ ಹಾಗೂ ಸ್ಟೇಷನರಿ ಸೆಂಟರ್‌ಗಳನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಾರ್ಪಡಿಸಲಾಗಿದೆ.

ರೇವಾ ವಿಶ್ವವಿದ್ಯಾಲಯ ಕುಲಪತಿ ಡಾ.ಪಿ.ಶ್ಯಾಮರಾಜು, ‘ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟು
ಕೊಂಡು ವಿದ್ಯಾರ್ಥಿಗಳ ಅಗತ್ಯತೆ ಹಾಗೂ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕ್ಯಾಂಪಸ್‍ನ ಫುಟ್‌ಪಾತ್‍ಗಳಲ್ಲಿ ವಿದ್ಯಾರ್ಥಿಗಳಿಗೆ ಕೂರಲು ಹಾಗೂ ಸಂವಾದ, ಚರ್ಚೆಗೂ ಸ್ಥಳಾವಕಾಶ ಕಲ್ಪಿಸಲಾಗಿದೆ. ಎಲ್ಲ ಬ್ಲಾಕ್‍ಗಳನ್ನು ಮುಚ್ಚಲಾಗಿದ್ದು, ಇದರ ಜವಾಬ್ದಾರಿಗೆ ಒಂದು ಕಾರ್ಯಪಡೆ ರಚಿಸಲಾಗಿದೆ‘ ಎಂದು ತಿಳಿಸಿದರು.

‘ಯುಜಿಸಿ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದ ಅನುಸಾರ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ಎಲ್ಲ ಪೂರ್ವಸಿದ್ದತೆಗಳನ್ನು ಮಾಡಲಾಗಿದೆ’ ಎಂದರು.

‘ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ಮಹತ್ವಪೂರ್ಣ ಭಾಗವಾಗಿದ್ದು, ಪ್ರಯೋಗಶಾಲೆಯಲ್ಲಿ ವಿದ್ಯಾರ್ಥಿಗಳು ಕಾರ್ಯನಿರ್ವಹಿಸಲು ಮುಂದಾಗದೇ ಇದ್ದಲ್ಲಿ ಅವರ ಶಿಕ್ಷಣ ಪೂರ್ಣಗೊಳ್ಳಲು ಸಾಧ್ಯವಿಲ್ಲ. ಇದಕ್ಕಾಗಿ ವಿದ್ಯಾರ್ಥಿಗಳನ್ನು ಕ್ಯಾಂಪಸ್‍ಗೆ ಕರೆ ತರದೆ ಅನ್ಯ ಮಾರ್ಗ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT