ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 48 ಲಕ್ಷ ಮೌಲ್ಯದ ‘ಆರ್‌ಎಂಡಿ‘ ಕ್ಯಾಂಟರ್ ಪತ್ತೆ

Last Updated 21 ಮೇ 2021, 16:53 IST
ಅಕ್ಷರ ಗಾತ್ರ

ಬೆಂಗಳೂರು: ಚಂದ್ರಾಲೇಔಟ್ ಠಾಣೆ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು ದೋಚಿದ್ದ ಆರ್‌ಎಂಡಿ ಪಾನ್‌ ಮಸಾಲ ಹಾಗೂ ಎಂ. ಗೋಲ್ಡ್ ಜರ್ದಾ ಬಾಕ್ಸ್‌ಗಳಿದ್ದ ಕ್ಯಾಂಟರ್ ಪತ್ತೆಯಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

‘ವಿಲ್ಸನ್‌ ಗಾರ್ಡನ್‌ನಲ್ಲಿರುವ ಗೋದಾಮಿನಲ್ಲಿ ₹ 48 ಲಕ್ಷ ಮೌಲ್ಯದ ಆರ್‌ಎಂಡಿ ಪಾನ್ ಮಸಾಲ ಹಾಗೂ ಎಂ. ಗೋಲ್ಡ್ ಜರ್ದಾ ಬಾಕ್ಸ್‌ಗಳನ್ನು ಕ್ಯಾಂಟರ್‌ಗೆ ತುಂಬಿಸಲಾಗಿತ್ತು. ಅದೇ ಕ್ಯಾಂಟರ್ ಮೇ 20ರಂದು ಮೈಸೂರು ರಸ್ತೆಯ ನಾಯಂಡನಹಳ್ಳಿ ಮಾರ್ಗವಾಗಿ ಹೊರ ಜಿಲ್ಲೆಯತ್ತ ಹೊರಟಿತ್ತು’ ಎಂದು ಪೊಲೀಸರು ಹೇಳಿದರು.

‘ಆಟೊ ಹಾಗೂ ದ್ವಿಚಕ್ರ ವಾಹನದಲ್ಲಿ ಸ್ಥಳಕ್ಕೆ ಬಂದಿದ್ದ ಆರೋಪಿಗಳು, ಕ್ಯಾಂಟರ್ ಅಡ್ಡಗಟ್ಟಿದ್ದರು. ಆಟೊದಲ್ಲಿ ಚಾಲಕನನ್ನು ಅಪಹರಿಸಿ, ಕ್ಯಾಂಟರ್‌ ಸಮೇತ ಪರಾರಿಯಾಗಿದ್ದರು. ಈ ಬಗ್ಗೆ ದೂರು ದಾಖಲಾಗಿತ್ತು. ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಕ್ಯಾಂಟರ್‌ ಪತ್ತೆ ಮಾಡಲಾಗಿದೆ’ ಎಂದೂ ತಿಳಿಸಿದರು.

‘ಆರೋಪಿಗಳು ಕಾಟನ್‌ಪೇಟೆಯಲ್ಲಿ ಕ್ಯಾಂಟರ್ ನಿಲ್ಲಿಸಿ ಹೋಗಿದ್ದಾರೆ. ಕ್ಯಾಂಟರ್‌ನಲ್ಲಿ ಆರ್‌ಎಂಡಿ ಸಾಗಿಸುತ್ತಿದ್ದ ಮಾಹಿತಿ ಗೊತ್ತಿದ್ದವರೇ ಕೃತ್ಯ ಎಸಗಿರುವ ಅನುಮಾನವಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT