ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಬೊ ಫೆಸ್ಟ್‌ನಲ್ಲಿ ಚಿಣ್ಣರ ಓಡಾಟ

Last Updated 7 ಏಪ್ರಿಲ್ 2019, 20:09 IST
ಅಕ್ಷರ ಗಾತ್ರ

ಕೆ.ಆರ್.ಪುರ: ನೋವೊಟೆಕ್ ರೋಬೊ ಸಂಸ್ಥೆ ಹಾಗೂ ಮಿಚಿಗನ್ ಲಾರೆನ್ಸ್‌ ತಾಂತ್ರಿಕ ವಿಶ್ವವಿದ್ಯಾಲಯ ಗೆದ್ದಲಹಳ್ಳಿಯ ಬೆಂಗಳೂರು ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ‘ರೋಬೊ ಫೆಸ್ಟ್’ ಆಯೋಜಿಸಿತ್ತು.

ಹತ್ತಾರು ಶಾಲೆಗಳ 5ನೇ ತರಗತಿಯಿಂದ 12ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಕುತೂಹಲದಿಂದ ರೋಬೊ ತಂತ್ರಜ್ಞಾನದ ಕುರಿತು ತಿಳಿದುಕೊಂಡರು. ಚರ್ಚೆ, ಸಂವಾದಗಳಲ್ಲೂ ಭಾಗವಹಿಸಿದರು. ‘ತಾಂತ್ರಿಕ ಮಾನವ’ರನ್ನು ಕೈಯಿಂದ ಮುಟ್ಟಿ, ಬಟನ್‌ಗಳನ್ನು ಒತ್ತುವ ಮೂಲಕ ನಿಯಂತ್ರಿಸುವುದನ್ನು ಕಲಿತರು. ಎಂಜಿನಿಯರಿಂಗ್‌, ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರ, ವೈದ್ಯಕೀಯ ರಂಗದಲ್ಲಿ ರೋಬೊಗಳು ಹೇಗೆ ಸಹಕಾರಿ ಆಗುತ್ತವೆ ಎಂದು ತಿಳಿದುಕೊಂಡರು. ತಂತ್ರಜ್ಞರು ರೋಬೊ ತಂತ್ರಜ್ಞಾನದಲ್ಲಿನ ಅನ್ವೇಷಣೆಗಳ ಕುರಿತು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT