ಸೋಮವಾರ, ಮೇ 10, 2021
19 °C
ಸೂರಿ, ಟೋನಿ ಕೊಲೆ ಪ್ರಕರಣದ ಆರೋಪಿ

ರೌಡಿ ಶಿವು ಮತ್ತು ಸಹಚರರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಂಗೇರಿಯಲ್ಲಿ ನಡೆದಿದ್ದ ಟೋನಿ ಮತ್ತು ಸೂರಿ ಎಂಬ ರೌಡಿಗಳ ಕೊಲೆ ಪ್ರಕರಣದಲ್ಲಿ ಭಾಗಿ ಆಗಿದ್ದಾನೆ ಎನ್ನಲಾದ ರೌಡಿ ಶಿವು ಅಲಿಯಾಸ್‌ ಶಿವರಾಜ್‌ (33) ಎಂಬಾತನೂ ಸೇರಿ ಮೂವರು ರೌಡಿಗಳನ್ನು ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಈತ ತನ್ನ ಸಹಚರರಾದ ಪ್ರಕಾಶ್‌ ನಗರದ ರಫಿ (31) ಹಾಗೂ ಕುರುಬರಹಳ್ಳಿ ಜೆ.ಸಿ. ನಗರದ ಪೈಪ್‌ಲೈನ್‌ ಮುಖ್ಯರಸ್ತೆಯ ಶಿವಶಂಕರ್ ಜತೆ ಬ್ಯಾಡರಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಬಿಇಎಲ್‌ 2ನೇ ಹಂತದ ಭಾರತ್‌ನಗರ ಪಾರ್ಕ್‌ ಬಳಿ, ತನ್ನ ಹಳೇ ವೈರಿ ಹಣಕಾಸು ವ್ಯವಹಾರ ನಡೆಸುವ ಸುಧೀಂದ್ರ ಅವರ ಮೇಲೆ ದಾಳಿ ಮಾಡಿ ಹಣ– ಆಭರಣ ದೋಚಲು ಹೊಂಚು ಹಾಕುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.

ಶಿವು ಮತ್ತು ಸುಧೀಂದ್ರ ನಡುವೆ ಹಳೇ ದ್ವೇಷವಿತ್ತು. ಹಗೆ ಸಾಧಿಸಲು ಸಮಯ ಕಾಯುತ್ತಿದ್ದ ಮುದ್ದಿನಪಾಳ್ಯ ಮುಖ್ಯರಸ್ತೆ ಸೊಲ್ಲಾಪುರದಮ್ಮ ದೇವಸ್ಥಾನದ ಎದುರು ರಸ್ತೆಯ ನಿವಾಸಿ ಶಿವು. ನಿತ್ಯ ಸುಧೀಂದ್ರ ಭಾರತ್‌ನಗರ ಪಾರ್ಕ್ ಮಾರ್ಗದಲ್ಲಿ ಬರುವ ವಿಷಯ ತಿಳಿದು ಕತ್ತಲಲ್ಲಿ ಸಹಚರರ ಜತೆ ಕಾಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಶಿವು ಮತ್ತು ಬಸವೇಶ್ವರ ನಗರದ ರೌಡಿಶೀಟರ್ ರಫಿ ವಿರುದ್ಧ ಕೊಲೆ, ದರೋಡೆ ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು