ಬುಧವಾರ, ಜನವರಿ 22, 2020
21 °C

ಔತಣಕೂಟಕ್ಕೆ ಕರೆದು ಹತ್ಯೆ; ಆರು ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡಿ.ಜೆ.ಹಳ್ಳಿ ಠಾಣೆಯ ರೌಡಿಶೀಟರ್ ಸೂರ್ಯ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇಮ್ರಾನ್ ಅಲಿಯಾಸ್ ಮಿರ್ಚಿ (22), ತೌಫಿಕ್ (26), ಮೈಕಲ್ (25), ಯೂಸುಫ್ (26), ರಾಜು ಹಾಗೂ ಸುರೇಶ್ ಬಂಧಿತರು.

‘ಬಾಗಲೂರು ನಿವಾಸಿಯಾದ ಸೂರ್ಯನನ್ನು ಆರೋಪಿಗಳು ಡಿ. 26ರಂದು ರಾತ್ರಿ ಔತಣಕೂಟಕ್ಕೆ ಕರೆದಿದ್ದರು. ಗೋವಿಂದಪುರದ ಶ್ಯಾಂಪುರ ರೈಲ್ವೆ ಗೇಟ್ ಸಮೀಪ ಆತನನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು’ ಎಂದು ಪೊಲೀಸರು ಹೇಳಿದರು.

‘ಕಳೆದ ವರ್ಷ ರೌಡಿ ಚಾರ್ಲ್ಸ್‌ ಕುಮಾರ್ ಎಂಬಾತನ ಕೊಲೆ ಆಗಿತ್ತು. ಆ ಪ್ರಕರಣದಲ್ಲಿ ಸೂರ್ಯನನ್ನು ಪೊಲೀಸರು ಬಂಧಿಸಿದ್ದರು. ಜೈಲಿನಲ್ಲಿದ್ದ ಸೂರ್ಯ ವಾರದ ಹಿಂದಷ್ಟೇ ಬಿಡುಗಡೆ ಆಗಿದ್ದ.’

‘ಚಾರ್ಲ್ಸ್ ಕುಮಾರ್‌ನ ಸಹಚರರಾಗಿರುವ ಆರೋಪಿಗಳು, ಸೂರ್ಯನನ್ನು ಔತಣಕೂಟಕ್ಕೆ ಆಹ್ವಾನಿಸಿ ಕೊಲೆ ಮಾಡಿದ್ದರು’ ಎಂದು ಪೊಲೀಸರು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು