ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿ ನಾಯಿ ಅಪ್ಪಿ ಕೊಲೆ: 10 ಆರೋಪಿಗಳ ಬಂಧನ

Published 9 ಜನವರಿ 2024, 15:25 IST
Last Updated 9 ಜನವರಿ 2024, 15:25 IST
ಅಕ್ಷರ ಗಾತ್ರ

ಬೆಂಗಳೂರು: ಲಕ್ಕಸಂದ್ರದ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ರೌಡಿ ಜಯಪ್ರಕಾಶ್ ಅಲಿಯಾಸ ನಾಯಿ ಅಪ್ಪಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ 10 ಆರೋಪಿಗಳನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.

ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಅಭಿಷೇಕ್ ಅಲಿಯಾಸ್ ಅಭಿ, ದಿಲೀಪ್ ಅಲಿಯಾಸ್ ಲಕ್ಕಸಂದ್ರ ದಿಲೀಪ್, ಶರತ್‌ಚಂದ್ರ ಅಲಿಯಾಸ್ ಪುಳಿಯೋಗರೆ, ರವಿಕುಮಾರ್, ಸುಬೇಂದು ಅಲಿಯಾಸ್ ಕಣ್ಣ ಹಾಗೂ ಕೊಲೆಗೆ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಕೃತ್ಯಕ್ಕೆ ಬಳಿಸಿದ ಕಾರು, ಮೂರು ದ್ವಿಚಕ್ರ ವಾಹನಗಳು ಹಾಗೂ ಮಾರಕಾಸ್ತ್ರಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ’ ಎಂದರು.

‘ಸ್ಥಳೀಯ ನಿವಾಸಿಯಾಗಿದ್ದ ಜಯಪ್ರಕಾಶ್, ಅಪರಾಧ ಹಿನ್ನೆಲೆಯುಳ್ಳವನಾಗಿದ್ದ. ಲಕ್ಕಸಂದ್ರದ ಬಸ್ ತಂಗುದಾಣ ಬಳಿಯೇ ದೇವಸ್ಥಾನವಿದೆ. ಪ್ರತಿ ವರ್ಷದಂತೆ ಈ ವರ್ಷವೂ ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಯಪ್ರಕಾಶ್ ಸಹ ಕಾರ್ಯಕ್ರಮದಲ್ಲಿದ್ದ. ಮಾರಕಾಸ್ತ್ರ ಸಮೇತ ಬಂದಿದ್ದ ದುಷ್ಕರ್ಮಿಗಳು, ಏಕಾಏಕಿ ದಾಳಿ ಮಾಡಿದ್ದರು. ಪ್ರಾಣ ಭಯದಲ್ಲಿ ಜಯಪ್ರಕಾಶ್ ತಪ್ಪಿಸಿಕೊಂಡು ರಸ್ತೆಯಲ್ಲಿ ಓಡಲಾರಂಭಿಸಿದ್ದ. ನಂತರ ಆತ ಹೋಟೆಲ್‌ವೊಂದಕ್ಕೆ ನುಗ್ಗಿದ್ದ. ಅಲ್ಲಿಗೂ ನುಗ್ಗಿದ ದುಷ್ಕರ್ಮಿಗಳು ಜಯಪ್ರಕಾಶ್‌ನನ್ನು ಕೊಲೆ ಮಾಡಿದ್ದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ್‌ ತಿಳಿಸಿದ್ದಾರೆ.

ರವಿಕುಮಾರ್
ರವಿಕುಮಾರ್
ಶರತ್‌ಚಂದ್ರ 
ಶರತ್‌ಚಂದ್ರ 
ದಿಲೀಪ್
ದಿಲೀಪ್
ಅಭಿಷೇಕ್
ಅಭಿಷೇಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT