ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸಮುದ್ರ ತೀರದ ರಾಮತೀರ್ಥ ಗುಡ್ಡದ ಗುಹೆಯೊಂದರಲ್ಲಿ ವಾಸವಿದ್ದ ರಷ್ಯನ್ ಮಹಿಳೆ ನಿನಾ ಕುಟಿನಾ ಮತ್ತು ಆಕೆಯ ಇಬ್ಬರು ಮಕ್ಕಳ ಗಡೀಪಾರು ಪ್ರಕ್ರಿಯೆಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.

ಈ ಸಂಬಂಧ ಇಸ್ರೇಲ್ನ ಟೆಲ್ ಅವಿವ್ ನಿವಾಸಿ ಡ್ರೊರ್ ಶ್ಲೊಮೊ ಗೋಲ್ಡ್ಸ್ಟೇನ್ (38) ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.

‘ಯಾವುದೇ ಗಡೀಪಾರು ಪ್ರಕ್ರಿಯೆಯನ್ನು ಪೂರ್ವಾಪರ ಯೋಚಿಸದೆ ಕಾರ್ಯಗತಗೊಳಿಸಲು ಆಗುವುದಿಲ್ಲ. ಪ್ರಕರಣದ ಕೂಲಂಕಷ ಪರಿಶೀಲನೆಗೆ ಸಮಗ್ರ ವಿಚಾರಣೆಯ ಅಗತ್ಯವಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಪೀಠ, ಪ್ರತಿವಾದಿಗಳು ಎರಡು ವಾರಗಳಲ್ಲಿ ತಮ್ಮ ಆಕ್ಷೇಪಣೆ ಸಲ್ಲಿಸಬೇಕು’ ಎಂದು ನಿರ್ದೇಶಿಸಿ ವಿಚಾರಣೆಯನ್ನು ಆಗಸ್ಟ್ 18ಕ್ಕೆ ಮುಂದೂಡಿದೆ.

ಕೋರಿಕೆ ಏನು?:

‘ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳಾದ ಪ್ರೇಮಾ ಸಾಲ್ ಕುಟಿನಾ (6) ಮತ್ತು ಅಮಾ ಕುಟಿನಾ (4) ಅವರನ್ನು ದಿಢೀರ್ ಎಂದು ಭಾರತದಿಂದ ಗಡೀಪಾರು ಮಾಡದಂತೆ ಭಾರತದ ವಿದೇಶಾಂಗ ಸಚಿವಾಲಯ, ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಬೆಂಗಳೂರಿನ ವಲಸೆ ಬ್ಯುರೊ ಕಚೇರಿಗೆ ನಿರ್ದೇಶಿಸಬೇಕು ಮತ್ತು ಮಕ್ಕಳನ್ನು ಅಕ್ರಮ ಬಂಧನದಿಂದ ತಕ್ಷಣವೇ ಬಿಡುಗಡೆಗೊಳಿಸಿ ನನಗೆ ಹಸ್ತಾಂತರಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ. ‘ಡ್ರೊರ್ ಶ್ಲೊಮೊ ಗೋಲ್ಡ್ಸ್ಟೇನ್ ನಿನಾ ಕುಟಿನಾ ಜೊತೆ ಸಹಜೀವನದ ಸಾಥಿ ಆಗಿದ್ದಾರೆ’ ಎನ್ನಲಾಗಿದೆ.

ಗೋಕರ್ಣ ಸಮುದ್ರ ತೀರದ ರಾಮತೀರ್ಥದ ಹತ್ತಿರದ ಗುಡ್ಡದ ಗುಹೆಯಲ್ಲಿ ವಾಸವಿದ್ದ ನಿನಾ ಕುಟಿನಾ (40) ಮತ್ತು ಆಕೆಯ ಇಬ್ಬರು ಪುತ್ರಿಯರನ್ನು ಗೋಕರ್ಣ ಠಾಣೆ ಪೊಲೀಸರು ಇದೇ 9ರಂದು ಸಂಜೆ ಪತ್ತೆ ಹಚ್ಚಿದ್ದರು. ನಂತರ ಸುರಕ್ಷಿತವಾಗಿ ನಾಡಿಗೆ ಕರೆತಂದಿದ್ದರು. ಸದ್ಯ ಇವರನ್ನು ತುಮಕೂರು ಜಿಲ್ಲೆಯ ದಿಬ್ಬೂರ್ ಕಾಲೋನಿಯಲ್ಲಿರುವ ವಿದೇಶಿ ಮಹಿಳಾ ಪ್ರಜೆಗಳಿಗಾಗಿಯೇ ತೆರೆಯಲಾಗಿರುವ ಸುರಕ್ಷಾ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.