ಭಾನುವಾರ, ನವೆಂಬರ್ 1, 2020
20 °C

ಜೆಲ್ಲಿ ರೂಪದಲ್ಲೂ ಡ್ರಗ್ಸ್ ಮಾರಾಟ: ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೆಲ್ಲಿ ರೂಪದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಅವರಿಂದ ₹4 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

ಕೊತ್ತನೂರಿನ ಜಾನ್ ನಿಖೋಲಸ್ (21) ಹಾಗೂ ಜೆ.ಪಿ.ನಗರದ ಇರ್ಫಾನ್ ಶೇಖ್ (29) ಬಂಧಿತರು.

‘ಎಂ.ಜಿ.ರಸ್ತೆಯ ಆರ್.ಎಸ್.ಐ ಕಾಂಪೌಂಡ್ ಬಳಿ ಕಾರಿನಲ್ಲಿ ಕುಳಿತಿದ್ದ ಆರೋಪಿಗಳು, ಪರಿಚಯಸ್ಥರಿಗೆ ಡ್ರಗ್ಸ್ ಮಾರಲು ಬಂದಿದ್ದರು. ಅದೇ ವೇಳೆಯೇ ಸಿಸಿಬಿ ತಂಡ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದೆ’ ಎಂದು ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದರು.

‘ಆರೋಪಿಗಳ ಬಳಿ ಜೆಲ್ಲಿ ರೂಪದಲ್ಲಿದ್ದ ಟಿಎಚ್‌ಸಿ ಡ್ರಗ್ಸ್ (50 ಜೆಲ್ಲಿಗಳು), 27 ಎಲ್‌ಎಸ್‌ಡಿ ಸ್ಟ್ರಿಪ್ಸ್, ಮೊಬೈಲ್, ಕಾರು ಜಪ್ತಿ ಮಾಡಲಾಗಿದೆ’ ಎಂದೂ ಹೇಳಿದರು.

‘ಪೆಡ್ಲರ್ ಅಶ್ವಿನ್ ಎಂಬಾತನಿಂದ ಡ್ರಗ್ಸ್ ಖರೀದಿಸುತ್ತಿದ್ದ ಆರೋಪಿಗಳು, ಅದನ್ನೆ ಮಾರಾಟ ಮಾಡಿ ಅಕ್ರಮ ಸಂಪಾದನೆ ಮಾಡುತ್ತಿದ್ದರು. ಅಶ್ವಿನ್‌ಗಾಗಿ ಹುಡುಕಾಟ ನಡೆದಿದೆ’ ಎಂದೂ ಅವರೂ ತಿಳಿಸಿದರು.


ಬಂಧಿತ ಆರೋಪಿಗಳಾದ ಜಾನ್ ನಿಖೋಲಸ್ ಹಾಗೂ ಇರ್ಫಾನ್ ಶೇಖ್ 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು