ಬೆಂಗಳೂರು: ಕೆಲ ಸಮಯ ಇಲ್ಲಿಯ ಫುಟ್ಪಾತ್ಗಳು ವಾಹನನಿಲುಗಡೆ ತಾಣಗಳಾಗುತ್ತವೆ. ಇನ್ನೂ ಕೆಲ ಸಮಯರಸ್ತೆಯಾಗಿ ಮಾರ್ಪಡುತ್ತವೆ. ಆದ್ದರಿಂದ ನಿವಾಸಿಗಳುತಡವರಿಸಿಕೊಂಡು ನಡೆಯುವುದು ಅನಿವಾರ್ಯವಾಗಿದೆ.

ನಗರದಕನಕಪುರ ರಸ್ತೆಯ ಸಾರಕ್ಕಿ ಸಿಗ್ನಲ್ ಸುತ್ತಮುತ್ತಲ ಪ್ರದೇಶದ ಕಥೆ ಇದು.

ಜೆ.ಪಿ.ನಗರ ಮೆಟ್ರೊ ನಿಲ್ದಾಣದ ಬಳಿ ಇರುವ ಸಾರಕ್ಕಿ ಸಿಗ್ನಲ್ನಿಂದ ಬಿಗ್ ಮಾರ್ಕೆಟ್ವರೆಗೂ ರಸ್ತೆಯ ಎರಡೂ ಬದಿಯ ಪಾದಚಾರಿ ಮಾರ್ಗಗಳ ಮೇಲೆ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಕೆಲವರು ಪಾದಚಾರಿ ಮಾರ್ಗದ ಮೇಲೆ ವಾಹನಗಳನ್ನು ನುಗ್ಗಿಸಿ
ಕೊಂಡು ಹೋಗುತ್ತಾರೆ. ಫುಟ್ಪಾತ್ ಮಾರ್ಗಗಳನ್ನು ವ್ಯಾಪಾರಿಗಳುಅತಿಕ್ರಮಣ ಮಾಡಿಕೊಂಡಿದ್ದಾರೆ. ಹೀಗಾಗಿ ಪಾದಚಾರಿಗಳಿಗೆ ನಡೆಯಲು ಸ್ಥಳವೇಇಲ್ಲ!

ಇಲ್ಲಿನ ನಿವಾಸಿಗಳನ್ನು ಮಾತಿಗೆಳೆದಾಗ,‘ಅಗತ್ಯ ವಸ್ತುಗಳ ಖರೀದಿ ಅಥವಾ ಬೇರೆ ಕಾರಣಗಳಿಗೆ ಮನೆಯಿಂದ ಹೊರಗೆ ಹೋಗಬೇಕಾದರೆ, ವಾಹನಗಳ ನಡುವೆ ತಡವರಿಸಿಕೊಂಡು ನಡೆಯಬೇಕು. ಹೀಗೆ ಹೋಗುವಾಗ ಹಿರಿಯ ನಾಗರಿಕರು ಮತ್ತು ಮಕ್ಕಳು ಬಿದ್ದು ಗಾಯಗೊಂಡಿರುವ ಪ್ರಕರಣಗಳು ನಡೆದಿವೆ. ಆದರೂಸಂಚಾರಿ ಪೊಲೀಸರು ಇದನ್ನುನೋಡಿಯೂ ನೋಡ
ದಂತೆ ಇರುತ್ತಾರೆ. ಪಾಲಿಕೆಯೂಗಮನಹರಿಸುತ್ತಿಲ್ಲ’ ಎಂದು ದೂರಿದರು.

ಅವರೆಲ್ಲರ ಆಗ್ರಹ ಒಂದೇ: ‘ಕಸಿದುಕೊಂಡಿರುವ ನಮ್ಮ ಮಾರ್ಗವನ್ನು ನಮಗೆ ವಾಪಸ್ ಕೊಡಿ’ ಎಂದು.

ದುರಸ್ತಿ ಕಾಣದ ಮಾರ್ಗಗಳು: ಒಂದು ಕಡೆ ಪಾದಚಾರಿ ಮಾರ್ಗಗಳು ವಾಹನ ನಿಲುಗಡೆ ತಾಣಗಳಾಗಿದ್ದರೆ, ಮತ್ತೊಂದು ಕಡೆ ದುರಸ್ತಿ ಕಾಣದೇ ಬಾಯ್ದೆರದು ನಿಂತಿವೆ. ಪಾದಚಾರಿ ಮಾರ್ಗಗಳು ಕಿತ್ತು ಹೋಗಿದ್ದು, ಅದರಕಲ್ಲುಗಳು ಮೇಲೆದ್ದಿವೆ. ಅವುವೇಗವಾಗಿ ಚಲಿಸುವ ವಾಹನಗಳ ಚಕ್ರಕ್ಕೆ ಸಿಲುಕಿ ಅನಾಹುತ ಉಂಟುಮಾಡಿದ ಪ್ರಸಂಗಗಳು ಸಹ ನಡೆದಿವೆ.

ಕಸ ಕಸಿವಿಸಿ: ಕಸ ಇಲ್ಲಿನ ನಿವಾಸಿಗಳನ್ನು ಕಾಡುತ್ತಿರುವ ಮತ್ತೊಂದು ಮುಖ್ಯಸಮಸ್ಯೆ. ವಸತಿ ಸಂಕೀರ್ಣಗಳ ಮುಂದಿನ ರಸ್ತೆ ಬದಿ ಕೆಲವರು ಕಸ ಮತ್ತು ಕಟ್ಟಡ ತ್ಯಾಜ್ಯವನ್ನುಸುರಿದು ಹೋಗುತ್ತಾರೆ. ಇದರಿಂದ ನಾಯಿ ಮತ್ತು ಬೀದಿ ದನಗಳ ಹಾವಳಿ ಹೆಚ್ಚಾಗಿದೆ.ಸೊಳ್ಳೆಗಳು ಸಂಖ್ಯೆಯೂ ಹೆಚ್ಚಾಗಿದೆ.

ಮಾಸಿದ ಬಿಳಿ ಪಟ್ಟಿ: ಎಂಟು ರಸ್ತೆಗಳನ್ನು ಸಂಪರ್ಕಿಸುವ ಸಾರಕ್ಕಿ ಸಿಗ್ನಲ್ ಪಾದಚಾರಿಗಳಿಗೆ ಅಪಾಯಕಾರಿಯಾಗಿದೆ. ಇಲ್ಲಿಬಿಳಿ ಪಟ್ಟಿಗಳು (ಝೀಬ್ರಾ ಕ್ರಾಸಿಂಗ್) ಬಹುತೇಕ ಮಾಸಿ ಹೋಗಿವೆ. 10ಸೆಕೆಂಡ್ ಮಾತ್ರ ಪಾದಚಾರಿ ಸಿಗ್ನಲ್ ಬೀಳುತ್ತದೆ. ರಸ್ತೆ ದಾಟಲು ಅಷ್ಟು ಸಮಯ ಸಾಕಾಗುತ್ತಿಲ್ಲ. ಮಕ್ಕಳು ಮತ್ತು ಹಿರಿಯ ನಾಗರಿಕರು ಜೀವ ಭಯದಿಂದ ರಸ್ತೆ ದಾಟುವ ಪರಿಸ್ಥಿತಿ ಇದೆ.

ಜ.19ರಂದು ಕನಕಪುರ ರೋಡ್ ಆಪಾರ್ಟ್ಮೆಂಟ್ಸ್ ಮೂವ್ಮೆಂಟ್ ಆಫ್ ಚೇಂಜ್ ಸಂಘಟನೆಯ ನೇತೃತ್ವದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದ್ದಾರೆ. ಬಿಬಿಪಿಎಂಪಿ ಅಧಿಕಾರಿಗಳೊಂದಿಗೆ ಹಲವು ಬಾರಿ ಸಭೆ ನಡೆಸಿದ್ದಾರೆ.ಆದರೂ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ!

ಪಾದಚಾರಿ ಮಾರ್ಗದ ಮೇಲೆ ನಡೆಯುವುದೇ ಕಷ್ಟವಾಗಿದೆ. ಹಲವು ಬಾರಿ ಮನವಿ ಮಾಡಿದರೂ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ.
-ಅಲೀಮ್,ಕನಕಪುರ ರಸ್ತೆ ನಿವಾಸಿ

ರಸ್ತೆ ನಿಮ್ಮದು, ಪಾದಚಾರಿ ಮಾರ್ಗ ನಮ್ಮದು, ನಮ್ಮ ಪಾದಚಾರಿ ಮಾರ್ಗವನ್ನು ನಮಗೆ ಮರಳಿ ಕೊಡಿ.
-ಕೀರ್ತಿ, ಕನಕಪುರ ರಸ್ತೆ ವಸತಿ ಸಂಕೀರ್ಣವೊಂದರ ನಿವಾಸಿ

ಪಾದಚಾರಿ ಮಾರ್ಗದ ಮೇಲೆ ಸಂಚರಿಸುವುದನ್ನು ತಡೆಯಲಾಗಿದೆ. ಮಾರ್ಗದ ಸುತ್ತ ಗ್ರಿಲ್ ಅಳವಡಿಸುತ್ತಿದ್ದೇವೆ.
-ದಿಲೀಪ್ ಕುಮಾರ್, ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ ಜಯನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.