ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್. ವಿ. ಸಾವಿತ್ರಮ್ಮ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ

Published 10 ಜೂನ್ 2024, 16:24 IST
Last Updated 10 ಜೂನ್ 2024, 16:24 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ ನೀಡುವ ‘ಲೇಖಕಿ ಎಚ್.ವಿ.ಸಾವಿತ್ರಮ್ಮ ದತ್ತಿ ಪ್ರಶಸ್ತಿ’ಗಾಗಿ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ. ‌

ಪ್ರಶಸ್ತಿ ವಿವರಗಳು: 2020ನೇ ಸಾಲಿಗೆ ‘ಕಥಾ ಸಂಕಲನ’, 2021ನೇ ಸಾಲಿಗೆ ‘ಅನುವಾದ ಸಾಹಿತ್ಯ’ (ಯಾವುದೇ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡಿರಬೇಕು), 2022ನೇ ಸಾಲಿಗೆ ’ಕಾದಂಬರಿ’ ಹಾಗೂ 2023ನೇ ಸಾಲಿಗೆ ಕಥಾ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಆಯಾ ಪ್ರಕಾರಗಳಲ್ಲಿ ಮೂರು ಪ್ರತಿಗಳನ್ನು ಕಳುಹಿಸಬೇಕು. ಕೃತಿಗಳನ್ನು ಕಳುಹಿಸಲು ಜೂನ್ 26 ಕೊನೆ ದಿನ. ಪ್ರತಿ ವರ್ಷದ ಪ್ರಶಸ್ತಿಯು ₹25000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದು ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲೇಖಕಿಯರ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಕಳಿಸಬೇಕು. ಈಗಾಗಲೇ ಸಾವಿತ್ರಮ್ಮ ಮತ್ತು ಅನುಪಮಾ ಪ್ರಶಸ್ತಿಗಳನ್ನು ಪಡೆದವರು ಇದರಲ್ಲಿ ಭಾಗವಹಿಸುವಂತಿಲ್ಲ.

ಕೃತಿಗಳನ್ನು ಕಳುಹಿಸುವ ವಿಳಾಸ: ಕರ್ನಾಟಕ ಲೇಖಕಿಯರ ಸಂಘ, 206, 2ನೇ ಮಹಡಿ, ವಿಜಯ ಮ್ಯಾನ್‌ಶನ್‌, 2ನೇ ತಿರುವು, 2ನೇ ಮುಖ್ಯರಸ್ತೆ, ಚಾಮರಾಜಪೇಟೆ ಬೆಂಗಳೂರು -560018

ಹೆಚ್ಚಿನ ವಿವರಗಳಿಗೆ: 9480051222, 8073765665

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT