ಸೋಮವಾರ, ಸೆಪ್ಟೆಂಬರ್ 27, 2021
26 °C

ಹಿರಿಯ ವಿಜ್ಞಾನಿ ಡಾ.ಎಂ. ಉದಯಕುಮಾರ್‌ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹಿರಿಯ ವಿಜ್ಞಾನಿ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಸ್ಯಶರೀರವಿಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದ ಡಾ.ಎಂ. ಉದಯಕುಮಾರ್ (75) ಶನಿವಾರ ನಿಧನರಾದರು.

ಬಹುದಿನಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ಆಂಧ್ರಪ್ರದೇಶದ ಗುಂಟೂರಿನ ಡಾ.ಉದಯಕುಮಾರ್, ರಷ್ಯಾದಲ್ಲಿ ಉನ್ನತ ವ್ಯಾಸಂಗ ಮಾಡಿದ್ದರು. ಎಂಎಸ್ಸಿ ಹಾಗೂ ಪಿಎಚ್‌.ಡಿ ಪದವಿ ಪಡೆದಿದ್ದರು. 1973ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸೇರಿದ್ದರು.

ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಎಆರ್‌ಐ) ಹಾಗೂ ನೆದರ್ಲೆಂಡ್‌ನ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಾಪಕರಾಗಿ ಕಾರ್ಯ ನಿರ್ವಹಿಸಿದ್ದರು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕುಲಾಂತರಿ ಸಸ್ಯಗಳ ಕುರಿತಾದ ಸಮೀಕ್ಷಾ ಸಮಿತಿಯ ಸಹ ಅಧ್ಯಕ್ಷರಾಗಿ, ಕೇಂದ್ರ ಪರಿಸರ ಇಲಾಖೆಯ ಕುಲಾಂತರಿ ಕುರಿತಾದ ಸಮಿತಿಯ ಸದಸ್ಯರಾಗಿ ಭಾರತದಲ್ಲಿ ಕುಲಾಂತರಿ ಸಸ್ಯಗಳ ಅಭಿವೃದ್ಧಿ ಬಗ್ಗೆ ಕಾನೂನುಗಳನ್ನು ರೂಪಿಸಲು ಶ್ರಮಿಸಿದ್ದರು.

ಅಂತ್ಯಕ್ರಿಯೆ ಹೆಬ್ಬಾಳದಲ್ಲಿ ನೆರವೇರಿತು. ಅವರಿಗೆ ಪತ್ನಿ ನಿವೃತ್ತ ಪ್ರಾಧ್ಯಾಪಕಿ ಪ್ರೊ. ನೀರಜಾ, ಪುತ್ರಿ ಡಾ.ಸೌಮ್ಯಾ ಇದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು