ಬೆಂಗಳೂರು: ನಗರದಲ್ಲಿ 2,690 ಚದರಡಿ ವಿಸ್ತೀರ್ಣದ ನಿವೇಶನಗಳಲ್ಲಿನ ವಸತಿ ಕಟ್ಟಡಗಳ ಸೆಟ್ಬ್ಯಾಕ್ನಲ್ಲಿ ಭಾರಿ ಕಡಿತ ಮಾಡಿ ನಗರಾಭಿವೃದ್ಧಿ ಇಲಾಖೆ ಅಂತಿಮ ಅಧಿಸೂಚನೆ ಹೊರಡಿಸಿದೆ.

2025ರ ನವೆಂಬರ್ 11ರಂದು ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಸಾರ್ವಜನಿಕರಿಂದ ಬಂದ ಸಲಹೆಗಳನ್ನು ಸ್ವೀಕರಿಸಿದ ನಂತರ ಸೋಮವಾರ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.

ನಿವೇಶನದ ಉದ್ದ–ಅಗಲಕ್ಕೆ ಅನುಗುಣವಾಗಿ ಸೆಟ್ಬ್ಯಾಕ್ ನಿರ್ಧರಿಸುವುದನ್ನು ಕೈಬಿಟ್ಟು, ಒಟ್ಟಾರೆ ಚದರ ಮೀಟರ್ಗೆ ಅನುಗುಣವಾಗಿ ಸೆಟ್ಬ್ಯಾಕ್ ಅನ್ನು ನಿಗದಿಪಡಿಸಲಾಗಿದೆ. ಇದರಂತೆ, 60 ಚದರ ಮೀಟರ್ವರೆಗಿನ (600 ಚದರಡಿ) ನಿವೇಶನದ ಕಟ್ಟಡ ಹಿಂಭಾಗ ಸೆಟ್ಬ್ಯಾಕ್ ಬಿಡುವ ಅಗತ್ಯವಿಲ್ಲ. ಮುಂಭಾಗದಲ್ಲಿ 0.75 ಮೀ (ಎರಡೂವರೆ ಅಡಿ), ಎಡ ಅಥವಾ ಬಲ ಭಾಗದಲ್ಲಿ 0.6 ಮೀ (ಎರಡು ಅಡಿ) ಜಾಗ ಬಿಡಬೇಕು.

1,500 ಚದರಡಿ ನಿವೇಶನದವರೆಗಿನ ಕಟ್ಟಡಗಳಿಗೆ ಹೊಸ ಸೆಟ್ಬ್ಯಾಕ್ನಲ್ಲಿ ಕಡಿಮೆ ಜಾಗವನ್ನು ನಿಗದಿಪಡಿಸಲಾಗಿದೆ. ಈ ಸೆಟ್ಬ್ಯಾಕ್ ಈಗಾಗಲೇ ನಿರ್ಮಾಣವಾಗಿರುವ ಕಟ್ಟಡಗಳಿಗೂ ಅನ್ವಯಿಸುತ್ತದೆ. ಇದರ ಜೊತೆಗೆ 250 ಚದರ ಮೀಟರ್ (ಸುಮಾರು 60 x 40 ಅಡಿ) ನಿವೇಶನದಲ್ಲಿ ನಿರ್ಮಿಸುವ ಕಟ್ಟಡಕ್ಕೂ ಸೆಟ್ಬ್ಯಾಕ್ನಲ್ಲಿ ಭಾರಿ ರಿಯಾಯಿತಿ ನೀಡಲಾಗಿದೆ. ಹೊಸ ಸೆಟ್ಬ್ಯಾಕ್ನಂತೆ, ಸ್ಟಿಲ್ಟ್ ಸೇರಿದಂತೆ ನಾಲ್ಕು ಅಂತಸ್ತು ವಸತಿ ಕಟ್ಟಡಗಳನ್ನು 12 ಮೀಟರ್ ಎತ್ತರ ಮೀರದಂತೆ ನಿರ್ಮಿಸಬಹುದಾಗಿದೆ.

ಹಿಂದಿನ ನಿಯಮಗಳ ಪ್ರಕಾರ, 20 x 30 ಅಡಿ ನಿವೇಶನಗಳಲ್ಲಿ ಕಟ್ಟಡದ ಸುತ್ತಲೂ ಒಂದು ಮೀಟರ್ (3 ಅಡಿ 4 ಇಂಚು) ಜಾಗ ಬಿಡಬೇಕು. 30 x 40 ಅಡಿ ನಿವೇಶನಗಳಲ್ಲಿ ಸುತ್ತಲೂ 1.50 ಮೀಟರ್ (5 ಅಡಿ) ಸೆಟ್ಬ್ಯಾಕ್ ಇತ್ತು.

ಹೊಸ ನಿಯಮದ ಪ್ರಕಾರ, 30 ಅಡಿ ರಸ್ತೆ ಹೊಂದಿರುವ 250 ಚದರಡಿ ನಿವೇಶನದಲ್ಲಿ ಅಭಿವೃದ್ಧಿ ವರ್ಗಾವಣೆ ಹಕ್ಕು(ಟಿಡಿಆರ್) ಹಾಗೂ ಪ್ರೀಮಿಯಂ ಎಫ್ಎಆರ್ ಅನ್ನೂ ಬಳಸಿಕೊಳ್ಳಬಹುದಾಗಿದೆ.

60 x 40 ಅಡಿಯಲ್ಲಿ 6 ಮನೆ: 200 ಚದರ ಮೀಟರ್ನಿಂದ 360 ಚದರ ಮೀಟರ್ವರೆಗಿನ ನಿವೇಶನದಲ್ಲಿ ಗರಿಷ್ಠ ಆರು ಮನೆಗಳನ್ನು ನಿರ್ಮಿಸಲು ಹೊಸ ನಿಯಮಗಳಲ್ಲಿ ಅವಕಾಶ ಮಾಡಿಕೊಡಲಾಗಿದೆ. ಈ ಹಿಂದೆ 60 x 40 ಅಡಿ ನಿವೇಶನದಲ್ಲಿ ನಾಲ್ಕು ಮನೆಗಳನ್ನು ಮಾತ್ರ ನಿರ್ಮಿಸಬಹುದಾಗಿತ್ತು. ಇನ್ನು, ಹೊಸ ನಿಯಮದಂತೆ 360 ಚದರ ಮೀಟರ್ನಿಂದ 750 ಮೀಟರ್ವರೆಗಿನ ನಿವೇಶನದಲ್ಲಿ ಎಂಟು ಮನೆಗಳನ್ನು ನಿರ್ಮಿಸಬಹುದಾಗಿದೆ. ಈ ಎಲ್ಲ ನಿವೇಶನಗಳು ಕನಿಷ್ಠ 9 ಮೀಟರ್ (30 ಅಡಿ) ರಸ್ತೆಯನ್ನು ಹೊಂದಿರಬೇಕು.

ರ್ಯಾಂಪ್ಗೆ ವಿನಾಯಿತಿ: ಅಪಾರ್ಟ್ಮೆಂಟ್ ಸೇರಿದಂತೆ ವಾಣಿಜ್ಯ ಸಂಕೀರ್ಣಗಳಲ್ಲಿ ಸೆಟ್ಬ್ಯಾಕ್ ಜಾಗವನ್ನು ಹೊರತುಪಡಿಸಿ ರ್ಯಾಂಪ್ ನಿರ್ಮಾಣ ಮಾಡಬೇಕಾದ ನಿಯಮವನ್ನು ಕೈಬಿಡಲಾಗಿದೆ. ಸೆಟ್ಬ್ಯಾಕ್ ಪ್ರದೇಶವನ್ನು ವಾಹನಗಳ ರ್ಯಾಂಪ್ ನಿರ್ಮಾಣಕ್ಕೆ ಬಳಸಿಕೊಳ್ಳಬಹುದು. ಈ ಜಾಗದಿಂದ ಕಾರುಗಳನ್ನು ಕೆಳ ಅಥವಾ ಮೇಲಿನ ಅಂತಸ್ತುಗಳಿಗೆ ಲಿಫ್ಟ್ ಮಾಡುವ ಅವಕಾಶವನ್ನೂ ನೀಡಲಾಗಿದೆ. 25 ಕಾರುಗಳ ನಿಲುಗಡೆಯಿಂದ 800 ಕಾರುಗಳ ನಿಲುಗಡೆವರೆಗಿನ ಪ್ರದೇಶಕ್ಕೆ ರ್ಯಾಂಪ್ ಅಗಲ ಮತ್ತು ಸಂಖ್ಯೆಗಳನ್ನು ನಿಗದಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.