ಭಾನುವಾರ, ಸೆಪ್ಟೆಂಬರ್ 27, 2020
22 °C

ಹಿರಿಯ ಸಾಹಿತಿ ಶೇಷನಾರಾಯಣ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹಿರಿಯ ಸಾಹಿತಿ, ಕಾದಂಬರಿ ಕಾರ ಶೇಷನಾರಾಯಣ (92) ಬುಧವಾರ ನಗರದ ಎಂ.ಎಸ್‌.ಪಾಳ್ಯದ ನಿವಾಸದಲ್ಲಿ ನಿಧನರಾದರು. ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

ಕರ್ನಾಟಕ– ತಮಿಳುನಾಡು ರಾಜ್ಯಗಳ ನೀರಿನ ಸಮಸ್ಯೆಯ ಕುರಿತು ಬರೆದ ಸಂಶೋಧನಾತ್ಮಕ ಕೃತಿಗಳಾದ ‘ಕಾವೇರಿ ಒಂದು ಚಿಮ್ಮು, ಒಂದು ಹೊರಳು’ ಮತ್ತು ‘ನಮ್ಮ ನದಿಗಳು ಮತ್ತು ಸಮಸ್ಯೆಗಳು’ ಅವರಿಗೆ ಹೆಸರು ತಂದುಕೊಟ್ಟವು.  ‘ಸೀಳುನಾಯಿ’, ‘ಮೊಲ್ಲೆ ಮಲ್ಲಿಗೆ’ ಸಹಿತ 6 ಕಥಾಸಂಕಲನಗಳು, ‘ಮೂಲಾನಕ್ಷತ್ರ’, ‘ಕಪಿಲೆ’, ‘ಎರಡು ಉಂಗುರ’ ಸಹಿತ 20 ಕಾದಂಬರಿ ಸೇರಿದಂತೆ 40ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ.

ತಮಿಳುನಾಡಿನ ಕೊಯಮತ್ತೂರಿ ನಲ್ಲಿ ಹುಟ್ಟಿದ್ದ ಅವರು 4ನೇ ತರಗತಿವರೆಗೆ ಓದಿದ್ದರು. ಬಡತನ ಅವರನ್ನು ಸಣ್ಣ ಪ್ರಾಯದಲ್ಲೇ ಕೆಲಸಕ್ಕೆ ದೂಡಿತ್ತು. ಗಾರೆ ಕೆಲಸ, ಲಾರಿಗಳಿಗೆ ಸರಕು ತುಂಬುವ ಕೂಲಿಯಾಗಿಯೂ ಕೆಲಸ ಮಾಡಿದ್ದರು. 1971ರಲ್ಲಿ ಬೆಂಗಳೂರಿಗೆ ಬಂದು ಪ್ರಿಂಟಿಂಗ್‌ ಪ್ರೆಸ್‌ ತೆರೆದರು. ಬಳಿಕ ಕನ್ನಡ ಸಾಹಿತ್ಯ ಪರಿಷತ್‌ನ ಅಚ್ಚುಕೂಟದ ಮೇಲ್ವಿಚಾರಕರಾದರು. ಅವರ ಒಳತುಡಿತದ ಭಾಷೆಯಾದ ಬರವಣಿಗೆ ಬಳಿಕ ಕೈಹಿಡಿಯಿತು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತಮಿಳುನಾಡು ಸರ್ಕಾರದ ಕುರಳ್‌ಪೀಠ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.