ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್’ ಸಂಗೀತೋತ್ಸವ

Published 5 ಆಗಸ್ಟ್ 2023, 23:12 IST
Last Updated 5 ಆಗಸ್ಟ್ 2023, 23:12 IST
ಅಕ್ಷರ ಗಾತ್ರ

ಬೆಂಗಳೂರು: ಸಿತಾರ್‌ ನವಾಜ್‌ ಉಸ್ತಾದ್‌ ಬಾಲೇಖಾನ್ ಮೆಮೊರಿಯಲ್ ಫೌಂಡೇಷನ್‌ ಟ್ರಸ್ಟ್‌ ವತಿಯಿಂದ ‘ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್’ ಸಂಗೀತೋತ್ಸವ ಜಯನಗರದಲ್ಲಿರುವ ಯುವಪಥದ ವಿವೇಕ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಟ್ರಸ್ಟ್‌ ವತಿಯಿಂದ 2022ನೇ ಸಾಲಿನ ‘ಇನ್ಫೊಸಿಸ್– ಸಿತಾರ್ ನವಾಜ್‌ ಬಾಲೇಖಾನ್‌ ಸ್ಮರಣಾರ್ಥ ಪ್ರಶಸ್ತಿ’ಯನ್ನು ಸರೋದ್‌ ವಾದಕ ಉಸ್ತಾದ್ ಆಶೀಶ್‌ ಖಾನ್‌ ಅವರಿಗೆ ನೀಡಿ ಗೌರವಿಸಲಾಯಿತು. ‘ಸಿತಾರ್‌ ನವಾಜ್‌ ಉಸ್ತಾದ ಬಾಲೇಖಾನ್ ಸ್ಮರಣಾರ್ಥ ಸಹ ಕಲಾವಿದ ಪ್ರಶಸ್ತಿ’ಯನ್ನು ತಬಲಾ ವಾದಕ ಸತೀಶ್‌ ಹಂಪಿಹೊಳಿ ಅವರಿಗೆ ನೀಡಿ ಸನ್ಮಾನಿಸಲಾಯಿತು. 

ಕಿರಣ–ಘರಣ ಗಾಯಕ ಪಂಡಿತ್‌ ವಿನಾಯಕ ತೊರ್ವಿ ಪ್ರಶಸ್ತಿ ಪ್ರದಾನ ಮಾಡಿದರು. ಕಲಾವಿದ ರಫೀಕ್ ಖಾನ್ , ಶಫಿಕ್ ಖಾನ್, ರಾಯೀಸ್ ಖಾನ್, ಉಸ್ತಾದ್ ಹಫೀಜ್ ಬಾಲೇಖಾನ್ ಹಾಜರಿದ್ದರು.

ಪ್ರವೀಣ್‌ ಜೆ. ಶೈಖ್‌, ಅನೀಸ ಖಾನ್‌ ಸೌದಾಗರ್‌, ದತ್ತಾತ್ರೇಯ ಜೋಶಿ, ಶಿವಕುಮಾರ್‌ ಮಹಾಂತ್‌ರಿಂದ ಸಂಗೀತ ಕಚೇರಿ ನಡೆಯಿತು. ಶ್ರೇಯಾ ವಿ. ಮೂರ್ತಿ, ಸತೀಶ್‌ ಹಂಪಿಹೊಳಿ, ಗೌರವ್‌ ಗಡಿಯಾರ್‌ ತಂಡದಿಂದ ಹಿಂದುಸ್ಥಾನಿ ಸಂಗೀತ ಕಾರ್ಯಕ್ರಮ ನಡೆಯಿತು. ಉಸ್ತಾದ್‌ ಆಶೀಸ್‌ಖಾನ್‌ ಅವರ ಸರೋದ್‌ ಕಾರ್ಯಕ್ರಮಕ್ಕೆ ರಾಜೇಂದ್ರ ನಾಕೋಡ್‌ ತಬಲದಲ್ಲಿ ಸಾಥ್‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT